Koragajja - ತುಳುನಾಡ ದೈವ ಕೊರಗಜ್ಜನ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು!




ಮಂಗಳೂರು: ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಅವಹೇಳನಾಕಾರಿಯಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಡಿದ್ದು, ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ.


ವಿದೇಶಿ ನಂಬರ್ ಬಳಸಿ ಕೊರಜ್ಜನ ಫೋಟೋವನ್ನು ಆಕ್ಷೇಪಾರ್ಹವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ತುಳುನಾಡಿನಲ್ಲಿ ಕೊರಗಜ್ಜನ ಆರಾಧಕರ ಸಂಖ್ಯೆ ಭಾರೀ ದೊಡ್ಡದಿದೆ.


ಜನರ ನಂಬಿಕೆಗಳಿಗೆ ಧಕ್ಕೆಯುಂಟು ಮಾಡುವಂತೆ, ಇನ್ನೊಬ್ಬರ ನಂಬಿಕೆಗಳಿಗೆ ನೋವುಂಟಾಗುವಂತೆ ಫೋಟೋವನ್ನು ಎಡಿಟ್ ಮಾಡಲಾಗಿದೆ. ಹೀಗಾಗಿ ಆರೋಪಿಗಳನ್ನು ಬಂಧಿಸಿ, ಕಾನೂನಿನ ರುಚಿ ತೋರಿಸಬೇಕು ಎಂಬ ಆಕ್ರೋಶದ ಮಾತುಗಳು ಕೇಳಿ ಬಂದಿವೆ.


ಇನ್ನೂ ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ವಿಎಚ್ ಪಿ, ಹಾಗೂ ಬಜರಂಗದಳ ಒತ್ತಾಯಿಸಿದೆ. ಅಲ್ಲದೆ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ವರದಿಯಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu