Hindu Convention in Club house- ಸೋಮವಾರ ಟೀಮ್ ಹಿಂದುತ್ವದ ಮೊಟ್ಟ ಮೊದಲ ಕ್ಲಬ್ ಹೌಸ್ ಹಿಂದೂ ಸಮಾವೇಶ- ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ

ಟೀಮ್ ಹಿಂದುತ್ವ ನೇತೃತ್ವದ ಮೊಟ್ಟ ಮೊದಲ ಕ್ಲಬ್ ಹೌಸ್ ಹಿಂದೂ ಸಮಾವೇಶ ಸೋಮವಾರ ನಡೆಯಲಿದೆ. ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.





ಈ ಬಗ್ಗೆ ಮಾಹಿತಿ ನೀಡಿದ ಟೀಮ್ ಹಿಂದುತ್ವ ತಂಡ, ಆಗಸ್ಟ್ 30ರಂದು ಸೋಮವಾರ ಸಂಜೆ 7:30ಕ್ಕೆ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದೆ.


ಕಾರ್ಯಕ್ರಮದಲ್ಲಿ ಪ್ರಮುಖ ಹಿಂದುತ್ವ ಮುಖಂಡರು ಭಾಗವಹಿಸಲಿದ್ದಾರೆ. ಇದೇ ದಿನ ಮೊದಲ ಬಾರಿಗೆ ಸಂಘ ಪರಿವಾರದ ಪ್ರಭಾವಿ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕ್ಲಬ್ ಹೌಸ್ ಗೆ ಆಗಮಿಸಲಿದ್ದಾರೆ.


ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಸ್ಟ್ 30ರ ಸೋಮವಾರ ರಾತ್ರಿ 7:30ಕ್ಕೆ ಸರಿಯಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

https://www.clubhouse.com/event/xXgnQ7Xb