-->

High Court SOP- 23-07-2021ರ ಹೈಕೋರ್ಟ್ ಮಾರ್ಗಸೂಚಿ: ಕೋರ್ಟ್ ಕಲಾಪ ಯಾವ ಜಿಲ್ಲೆಯಲ್ಲಿ ಹೇಗಿದೆ...

High Court SOP- 23-07-2021ರ ಹೈಕೋರ್ಟ್ ಮಾರ್ಗಸೂಚಿ: ಕೋರ್ಟ್ ಕಲಾಪ ಯಾವ ಜಿಲ್ಲೆಯಲ್ಲಿ ಹೇಗಿದೆ...






ಮುಂದಿನ ಸೋಮವಾರ (26-07-2021)ರಿಂದ ಜಾರಿಗೆ ಬರುವಂತೆ ಕೋರ್ಟ್ ಕಲಾಪಗಳಲ್ಲಿ ಈ ಕೆಳಗಿನ ಬದಲಾವಣೆ ಮಾಡಿ ಕರ್ನಾಟಕ ಹೈಕೋರ್ಟ್ ನೂತನ ಮಾರ್ಗಸೂಚಿ(SOP) ಹೊರಡಿಸಿದೆ.


ಕಳೆದ ಐದು ದಿನಗಳಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಕೊರೋನಾ ಪ್ರಕರಣ ಕಂಡುಬಂದಿರುವ 23 ಜಿಲ್ಲೆಗಳಲ್ಲಿ ಕೋರ್ಟ್ ಕಲಾಪದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.


ಯಾವ 23 ಜಿಲ್ಲೆಗಳು :


೧) ಬಾಗಲಕೋಟೆ, ೨) ಬಳ್ಳಾರಿ, ೩) ಬೀದರ್, ೪) ಚಾಮರಾಜನಗರ, ೫) ಚಿಕ್ಕಬಳ್ಳಾಪುರ, ೬) ಚಿತ್ರದುರ್ಗ, ೭) ಧಾರವಾಡ, ೮) ಗದಗ, ೯) ಹಾವೇರಿ, ೧೦) ಕಲಬುರ್ಗಿ, ೧೧) ಕೋಲಾರ, ೧೨) ಕೊಪ್ಪಳ, ೧೩) ರಾಯಚೂರು, ೧೪) ರಾಮನಗರ, ೧೫) ಉ.ಕ. ಕಾರವಾರ, ೧೬) ವಿಜಯಪುರ, ೧೭) ಯಾದಗೀರ್


೧೮) ಬೆಂಗಳೂರು ನಗರ, ೧೯) ದಾವಣಗೆರೆ, ೨೦) ಮಂಡ್ಯ, ೨೧) ಬೆಳಗಾವಿ, ೨೨) ಚಿಕ್ಕಮಗಳೂರು, ೨೩) ಕೊಡಗು-ಮಡಿಕೇರಿ...


ಈ 23 ಜಿಲ್ಲೆಗಳಲ್ಲಿ ಈ ಕೆಳಗಿನ ನಿರ್ಬಂಧಗಳನ್ನು ವಿಧಿಸಲಾಗಿದೆ.


ಕೋರ್ಟ್ ಕಟ್ಟಡ ಯಾ ನ್ಯಾಯಾಲಯ ಸಂಕೀರ್ಣದ ಪ್ರವೇಶ ದ್ವಾರದಲ್ಲಿ ಒಳ ಪ್ರವೇಶಿಸುವ ಎಲ್ಲ ವ್ಯಕ್ತಿಗಳ ಥರ್ಮಲ್ ಪರೀಕ್ಷೆ ಕಡ್ಡಾಯ ನಡೆಸುವುದು. ಒಂದು ವೇಳೆ, ಯಾರಾದರೂ ಇದಕ್ಕೆ ನಿರಾಕರಿಸಿದರೆ, ಅಂಥವರ ಪ್ರವೇಶ ನಿರಾಕರಿಸುವುದು.


ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ, ವಕೀಲರಿಗೆ ಪ್ರತ್ಯೇಕ ದ್ವಾರ ಕಲ್ಪಿಸುವುದು. ಇನ್ನೊಂದು ಪ್ರತ್ಯೇಕ ದ್ವಾರದಲ್ಲಿ ಕಕ್ಷಿದಾರರು, ಸಾಕ್ಷಿದಾರರು, ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಇತರರಿಗೆ ಪ್ರವೇಶದ ಅವಕಾಶ ಕಲ್ಪಿಸುವುದು. ಎಲ್ಲ ದ್ವಾರಗಳಲ್ಲೂ ಕೈಗೆ ಹಾಕಲು ಸ್ಯಾನಿಟೈಸರ್ ವ್ಯವಸ್ಥೆ ಮಾಡುವುದು.



ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು. ವಕೀಲ ಸಂಘದ ಸದಸ್ಯರು ಕಡ್ಡಾಯವಾಗಿ ಎರಡು ಮಾಸ್ಕ್ ಹಾಕಲು ಸೂಚನೆ. ಯಾರಾದರೂ ಈ ನಿಯಮ ಪಾಲಿಸದಿದ್ದರೆ, ಅಂಥವರನ್ನು ನ್ಯಾಯಾಲಯ ಸಂಕೀರ್ಣ ಅಥವಾ ಕೋರ್ಟ್‌ ಕಟ್ಟಡದಿಂದ ಹೊರ ಹಾಕಲು ಆಯಾ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಅಥವಾ ಹಿರಿಯ ನ್ಯಾಯಾಧೀಶರಿಗೆ ಅಧಿಕಾರ ನೀಡಲಾಗಿದೆ.


ನ್ಯಾಯಾಲಯಕ್ಕೆ ಆಗಮಿಸುವವರ ಸಂಖ್ಯೆಯನ್ನು ನಿಯಂತ್ರಿಸಲು ಅಥವಾ ಕಡಿತಗೊಳಿಸಲು ಕೋರ್ಟ್ ಕಲಾಪವನ್ನು ಎರಡು ಪ್ರತ್ಯೇಕ ಅಧಿವೇಶನಗಳಾಗಿ ವಿಂಗಡಿಸಲಾಗಿದೆ. ಕಕ್ಷಿದಾರರು, ಸಾಕ್ಷಿದಾರರು ತೀರಾ ಅಗತ್ಯ ಇದ್ದರೆ ಮಾತ್ರ ನ್ಯಾಯಾಲಯಕ್ಕೆ ಬರುವಂತೆ ಆಯಾ ಕೇಸು ನಡೆಸುವ ವಕೀಲರು ನೋಡಿಕೊಳ್ಳುವುದು.


ವಕೀಲರ ಸಂಘ, ಲೈಬ್ರೇರಿ, ಕ್ಯಾಂಟೀನ್, ಜೆರಾಕ್ಸ್, ಟೈಪಿಸ್ಟ್, ನೋಟರಿ, ಓಥ್ ಕಮಿಷನರ್ ಸೇವೆಯನ್ನು ಷರತ್ತಿನ ಮೇರೆಗೆ ಸಡಿಲಗೊಳಿಸಲಾಗಿದೆ. ಈ ಎಲ್ಲ ಸೇವೆ ಒದಗಿಸುವವರು ಎರಡು ಲಸಿಕೆಗಳನ್ನು ಪಡೆದುಕೊಂಡಿರುವ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.



ರಿಕ್ರಿಯೇಷನ್, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಕೀಲರ ಸಂಘದ ಕಚೇರಿಯಲ್ಲಿ ಯಾ ಆವರಣದಲ್ಲಿ ನಡೆಸುವರೇ ಅವಕಾಶ ನಿರಾಕರಿಸಲಾಗಿದೆ. ಮೇ 21, 2021ರ ಹೈಕೋರ್ಟ್ ಮಾರ್ಗಸೂಚಿಯಲ್ಲಿ ಮಾಡಲಾದ ಎಲ್ಲ ವ್ಯವಸ್ಥೆಗಳನ್ನು ತೆಗೆದುಹಾಕಿ, ಈ ಮೇಲಿನ 23 ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಎಂದಿನಂತೆ ಸಹಜ ದೈನಂದಿನ ಕೋರ್ಟ್ ಕಲಾಪಗಳು ನಡೆಯಲಿವೆ.


ಈ ಮಾರ್ಗಸೂಚಿಯಲ್ಲಿ ಮಾಡಲಾದ ಸಡಿಲಿಕೆಯನ್ನು ಮತ್ತೆ ತೆಗೆದುಹಾಕಲು ಯಾ ಭಾಗಶಃ ನಿರ್ಬಂಧ ವಿಧಿಸಲು ಮುಖ್ಯ ನ್ಯಾಯಮೂರ್ತಿ ಅವರಿಗೆ ಅಧಿಕಾರ ನೀಡಲಾಗಿದೆ.

ಇದೇ ವೇಳೆ, ಈ ಕೆಳಗಿನ 7 ಜಿಲ್ಲೆಗಳಲ್ಲಿ 25-06-2021ರ ಮಾರ್ಗಸೂಚಿ ಮುಂದುವರಿಯಲಿದೆ.


ಆ ಜಿಲ್ಲೆಗಳ ಪಟ್ಟಿ

೧) ಬೆಂಗಳೂರು ನಗರ, ೨) ದಕ್ಷಿಣ ಕನ್ನಡ- ಮಂಗಳೂರು, ೩) ಹಾಸನ, ೪) ಮೈಸೂರು, ೫) ಶಿವಮೊಗ್ಗ, ೬) ತುಮಕೂರು, ೭) ಉಡುಪಿ.




ಈ ಮೇಲಿನ 7 ಜಿಲ್ಲೆಗಳಲ್ಲಿ ಸಾಕ್ಷ್ಯಗಳನ್ನು ದಾಖಲಿಸುವ ಕುರಿತು ನ್ಯಾಯಾಲಯಕ್ಕೆ ಹಾಕಿರುವ ಸಂಖ್ಯಾ ಮಿತಿಯ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಹಾಗೂ ಎಲ್ಲ 7 ಜಿಲ್ಲೆಗಳಲ್ಲಿ ಎರಡೂ ಅವಧಿಯ ಕಲಾಪಗಳಲ್ಲಿ ಸಾಕ್ಷ್ಯ ದಾಖಲೀಕರಣ ಮಾಡಬಹುದು.


ಈ ಮೇಲಿನ 7 ಜಿಲ್ಲೆಗಳಲ್ಲಿ, ನ್ಯಾಯಾಲಯಗಳಲ್ಲಿ ಪ್ರತಿ ದಿನ 40ಕ್ಕಿಂತ ಹೆಚ್ಚು ಇಲ್ಲದಂತೆ ಕೇಸುಗಳ ವಿಚಾರಣೆಯನ್ನು ನಡೆಸುವುದು. ಈ ಹಿಂದೆ ಇದ್ದ 30 ಕೇಸ್‌ ವಿಚಾರಣೆಯ ಮಿತಿಯನ್ನು 40ಕ್ಕೆ ಹೆಚ್ಚಿಸಲಾಗಿದೆ.



ವಕೀಲರ ಸಂಘ, ಲೈಬ್ರೇರಿ, ಕ್ಯಾಂಟೀನ್, ಜೆರಾಕ್ಸ್, ಟೈಪಿಸ್ಟ್, ನೋಟರಿ, ಓಥ್ ಕಮಿಷನರ್ ಸೇವೆಯನ್ನು ಷರತ್ತಿನ ಮೇರೆಗೆ ಸಡಿಲಗೊಳಿಸಲಾಗಿದೆ. ಈ ಎಲ್ಲ ಸೇವೆ ಒದಗಿಸುವವರು ಎರಡು ಲಸಿಕೆಗಳನ್ನು ಪಡೆದುಕೊಂಡಿರುವ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.



ಈ ಬದಲಾವಣೆಯನ್ನು ಹೊರತುಪಡಿಸಿ 25-06-2021ರ ಮಾರ್ಗಸೂಚಿಯಲ್ಲಿನ ನಿರ್ಬಂಧಗಳು ಮುಂದುವರಿಯಲಿದೆ.



ಮುಂದಿನ ಆದೇಶದ ವರೆಗೆ, ಇದನ್ನು ಹೊರತುಪಡಿಸಿ ಎಲ್ಲ 30 ಜಿಲ್ಲೆಗಳಲ್ಲಿ ನ್ಯಾಯಾಲಯ ಸಂಕೀರ್ಣದ ಹೊರಗೆ ಭೌತಿಕ ಫೈಲಿಂಗ್‌ಗೆ ಪ್ರತ್ಯೇಕ ಕೌಂಟರ್ ಮುಂದುವರಿಸುವುದು.

Ads on article

Advertise in articles 1

advertising articles 2

Advertise under the article