-->

Corona Update- ಬೆಂಗಳೂರು ಬಳಿಕ ದ. ಕನ್ನಡ ಅತಿ ಹೆಚ್ಚು ಕೋವಿಡ್ ಪೀಡಿತ!: ಮತ್ತೆ 300ರ ಗಡಿ ದಾಟಿದ ಹೊಸ ಪ್ರಕರಣ

Corona Update- ಬೆಂಗಳೂರು ಬಳಿಕ ದ. ಕನ್ನಡ ಅತಿ ಹೆಚ್ಚು ಕೋವಿಡ್ ಪೀಡಿತ!: ಮತ್ತೆ 300ರ ಗಡಿ ದಾಟಿದ ಹೊಸ ಪ್ರಕರಣ




ಕರಾವಳಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತೆ ಭಾರೀ ನೆಗೆತ ಕಂಡಿದೆ. ಭಾನುವಾರ 115 ಇದ್ದ ಹೊಸ ಪ್ರಕರಣಗಳ ಸಂಖ್ಯೆ ಸೋಮವಾರ 357 ತಲುಪಿದೆ. 


ಪಾಸಿಟಿವಿಟಿ ದರ ಶೆ. 2.92 ಆಗಿದ್ದು, ಭಾನುವಾರ ಕೇವಲ ಒಂದು ಕೋವಿಡ್‌ನಿಂದಾಗಿ ಸಾವು ಸಂಭವಿಸಿದ್ದರೆ, ಸೋಮವಾರ ನಾಲ್ಕು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.



ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಏಕಾಏಕಿ ಏರಿಕೆ ಕಂಡುಬಂದಿದೆ.


ಬೆಂಗಳೂರು ನಗರ ಹೊರತುಪಡಿಸಿದರೆ ರಾಜ್ಯದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಕ್ಷಿಣ ಕನ್ನಡದಲ್ಲಿ ಕಂಡುಬಂದಿರುವುದು ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.







ಬೆಂಗಳೂರು ನಗರದಲ್ಲಿ 467 ನೂತನ ಪ್ರಕರಣಗಳು ಕಂಡುಬಂದಿದ್ದರೆ, ದಕ್ಷಿಣ ಕನ್ನಡದಲ್ಲಿ 357 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ವ್ಯಾಪಕವಾಗಿ ಸೋಂಕು ಹರಡಿದ್ದ ಮೈಸೂರಿನಲ್ಲಿ ಇಂದು 162 ಹೊಸ ಪ್ರಕರಣಗಳು ದಾಖಲಾಗಿವೆ.



ಉಡುಪಿಯಲ್ಲಿ 68 ಪ್ರಕರಣಗಳು ಇಂದು ಹೊಸದಾಗಿ ದಾಖಲಾಗಿವೆ. ದಕ್ಷಿಣ ಕನ್ನಡದ ನೆರೆಹೊರೆಯ ಜಿಲ್ಲೆಗಳಾದ ಚಿಕ್ಕಮಗಳೂರಿನಲ್ಲಿ 38, ಹಾಸನದಲ್ಲಿ 57, ಕೊಡಗು ಜಿಲ್ಲೆಯಲ್ಲಿ 19, ಹಾಗೂ ಶಿವಮೊಗ್ಗದಲ್ಲಿ 52 ಪ್ರಕರಣಗಳು ದಾಖಲಾಗಿವೆ. ಉತ್ತರ ಕನ್ನಡದಲ್ಲಿ 19 ಪ್ರಕರಣಗಳು ದಾಖಲಾಗಿದೆ.



ಮಂಗಳೂರಿನಲ್ಲಿ ಈ ರೀತಿ ಏಕಾಏಕಿ ಸೋಂಕು ಹರಡುತ್ತಿರುವುದು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article