-->

Kid died- 11 ತಿಂಗಳ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ: ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗು ಸಾವು

Kid died- 11 ತಿಂಗಳ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ: ಅಂಗಳದಲ್ಲಿ ಊಟ ಮಾಡುತ್ತಿದ್ದ ಮಗು ಸಾವು





ಅಂಗಳದಲ್ಲಿ ಊಟ ಮಾಡುತ್ತಿದ್ದ 11 ತಿಂಗಳ ಮಗುವಿನ ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.



ಅಂಗಳದಲ್ಲಿ ಆಟವಾಡುತ್ತಿದ್ದಾಗ ತಲೆಯ ಮೇಲೆ ಬಿದ್ದ ಪರಿಣಾಮ 11 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಂಸಭಾವಿಯಲ್ಲಿ ನಡೆದಿದೆ.


ಹಂಸಭಾವಿಯ ಮಲ್ಲಿಕಾರ್ಜುನ ಮತ್ತು ಮಾಲಾ ದಂಪತಿಗಳ ಮಗು ಮೃತಪಟ್ಟ ಮಗುವಾಗಿದ್ದು, ಮನೆಯ ಎದುರು ಮಗುವನ್ನು ಆಟವಾಡಿಸುತ್ತಾ ಊಟ ಮಾಡಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.


ಘಟನೆ ನಡೆದ ತಕ್ಷಣವೇ ಮಗುವನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಿನ್ನೆ ರಾತ್ರಿ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎಂದು ವರದಿಯಾಗಿದ್ದು, ಮಗುವನ್ನು ಕಳೆದುಕೊಂಡಿರುವ ಪೋಷಕರ ರೋದನೆ ಮುಗಿಲು ಮುಟ್ಟಿದೆ.

Ads on article

Advertise in articles 1

advertising articles 2

Advertise under the article