-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Halli Hakki - 'ಹಳ್ಳಿಹಕ್ಕಿ'ಯ ವಿಡಿಯೋ ಪ್ರಸಾರ ಆದ್ರೆ, ವಿಶ್ವನಾಥ್ ಸಂಸ್ಕೃತಿಯೂ ಬಹಿರಂಗವಾಗ್ತದೆ; ರೇಣುಕಾಚಾರ್ಯ

Halli Hakki - 'ಹಳ್ಳಿಹಕ್ಕಿ'ಯ ವಿಡಿಯೋ ಪ್ರಸಾರ ಆದ್ರೆ, ವಿಶ್ವನಾಥ್ ಸಂಸ್ಕೃತಿಯೂ ಬಹಿರಂಗವಾಗ್ತದೆ; ರೇಣುಕಾಚಾರ್ಯ





ಬೆಂಗಳೂರು: ಹಳ್ಳಿಹಕ್ಕಿ ಎಂದೇ ಖ್ಯಾತಿ ಪಡೆದಿರುವ ಎಚ್. ವಿಶ್ವನಾಥ್ ಅವರ ಆಡಿಯೋ, ವಿಡಿಯೋ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದು ಪ್ರಸಾರವಾದರೆ ಅವರ ಸಂಸ್ಕೃತಿ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿಶ್ವನಾಥ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.


ಸರ್ಕಾರದ ವಿರುದ್ಧ ವಿಶ್ವನಾಥ್ ಮಾಡಿರುವ 20 ಸಾವಿರ ಕೋಟಿ ರೂಪಾಯಿ ಟೆಂಡರ್ ಹಗರಣದ ಆರೋಪದ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಚ್. ವಿಶ್ವನಾಥ್ ಹತಾಶರಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಚ್. ವಿಶ್ವನಾಥ್ ಆಡಿಯೋ, ವಿಡಿಯೋ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದು ಒಂದು ವೇಳೆ ಪ್ರಸಾರವಾದರೆ ಅವರ ಸಂಸ್ಕೃತಿ ಎಂತಾದ್ದು ಎಂಬುದು ಜಗಜ್ಜಾಹೀರು ಆಗಲಿದೆ ಎಂದು ಟಾಂಗ್ ನೀಡಿದರು.





ವಿಶ್ವನಾಥ್ ಅವರು ಬಿ ಎಸ್ ವೈ, ಕುಮಾರಸ್ವಾಮಿ, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಹೆಚ್.ಡಿ. ದೇವೇಗೌಡ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಆ ವ್ಯಕ್ತಿ ನಾಲಿಗೆ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ನಾನು ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಆದರೆ ವಿಶ್ವನಾಥ್ ಇಂತಹ ಆರೋಪ ಮಾಡುವುದು ತಪ್ಪು ಎಂದು ಹೇಳಿದರು.


ನೀರಾವರಿ ಇಲಾಖೆ ಟೆಂಡರ್ ಸರ್ಕಾರಿ ನಿಯಮಗಳ ಪ್ರಕಾರ ಪಾರದರ್ಶಕವಾಗಿ ನಡೆದಿದೆ. ನೀರಾವರಿ ಇಲಾಖೆಗೆ ಬಿಡುಗಡೆಯಾದ ಹಣ ಹಾಗೂ ಕಾಮಗಾರಿ ಪ್ರತಿಯೊಂದರ ಬಗ್ಗೆಯೂ ಅಂತರ್ಜಾಲದಲ್ಲಿ ಎಲ್ಲ ಮಾಹಿತಿ ಇದೆ. ಹಾಗಿರುವಾಗ ಅಕ್ರಮ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

Ads on article

Advertise in articles 1

advertising articles 2

Advertise under the article