Elephant rescue | ಕಂದಕಕ್ಕೆ ಬಿದ್ದ ಆನೆಗೆ ಜೆಸಿಬಿ ನೆರವು; ಮೇಲೆ ಬರುತ್ತಲೇ ರೋಷ ತೋರಿದ ಮರಿಯಾನೆ




ಮರಿಯಾನೆಯೊಂದು ಆಯ ತಪ್ಪಿ ಕಂದಕಕ್ಕೆ ಬಿದ್ದಿತು. ಮೇಲಕ್ಕೆ ಬರಲು ಎಲ್ಲ ರೀತಿಯ ಪ್ರಯತ್ನ ಮಾಡಿತು. ಪ್ರತಿ ಬಾರಿಯೂ ವಿಫಲವಾಗುತ್ತಿತ್ತು.


ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿ ಜೆಸಿಬಿಯನ್ನು ತಂದರು.


ಕಂದಕಕ್ಕೆ ಬಿದ್ದ ಮರಿಯಾನೆ ರಕ್ಷಣೆ ಮಾಡುವ ಕಾರ್ಯಾಚರಣೆ ಶುರುವಾಯಿತು.  ಮೇಲೆ ಬರಲು  ಪ್ರಯತ್ನಿಸುತ್ತಿದ್ದ ಆನೆಗೆ ಜೆಸಿಬಿ ಮೂಲಕ ಸಹಾಯ ಮಾಡಲಾಯಿತು. ಹಿಂಬದಿಯಿಂದ ಮೇಲಕ್ಕೆ ತಳ್ಳಿದ ಪರಿಣಾಮ ಕೊನೆಗೂ ಮರಿಯಾನೆ ಮೇಲೆ ಬರುವಲ್ಲಿ ಯಶಸ್ವಿಯಾಯಿತು.




ಆಗಲೇ ಒಂದೆರಡು ಬಾರಿ ಹೂಂಕರಿಸಿ ತನ್ನ ಕೋಪ ತೋರಿಸಿದ್ದ ಮರಿಯಾನೆ ಮೇಲೆ ಬರುತ್ತಲೇ ಜೆಸಿಬಿ ಮೇಲೆ ಸಿಟ್ಟು ಪ್ರದರ್ಶಿಸಿತು. ತನ್ನ ರೋಷವನ್ನು ವಾಹನದ ಮೇಲೆ ಪ್ರದರ್ಶಿಸಿತು.


ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ವಾಹನದ ಚಾಲಕನಿಗೆ ಸೂಚನೆ ನೀಡಿ ಯಾವುದೇ ಹಾನಿ ಮಾಡದಂತೆ ತಡೆದರು. ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದರು.


ಈ ಮೂಲಕ ಆನೆಯ ರಕ್ಷಣಾ ಕಾರ್ಯ ಸುರಕ್ಷಿತವಾಗಿ ಮುಗಿಯಿತು. ರಕ್ಷಿಸಲ್ಪಟ್ಟ ಆನೆ ತನ್ನ ಹಾದಿ ಹಿಡಿಯಿತು.