-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
MRG Group chairman Prakash Shetty bags times award | ಟೈಂಸ್ ಬ್ಯುಸಿನೆಸ್ ಅವಾರ್ಡ್ ಮುಡಿಗೇರಿಸಿದ ಎಂಆರ್‍ಜಿ ಸಮೂಹದ ಕೆ.ಪ್ರಕಾಶ್ ಶೆಟ್ಟಿ

MRG Group chairman Prakash Shetty bags times award | ಟೈಂಸ್ ಬ್ಯುಸಿನೆಸ್ ಅವಾರ್ಡ್ ಮುಡಿಗೇರಿಸಿದ ಎಂಆರ್‍ಜಿ ಸಮೂಹದ ಕೆ.ಪ್ರಕಾಶ್ ಶೆಟ್ಟಿ




ಮಂಗಳೂರು: ಉಡುಪಿ ಜಿಲ್ಲೆಯ ಪಡುಬಿದ್ರಿ ಇಲ್ಲಿನ ಕೊರಂಗ್ರಪಾಡಿ ಮನೆತನದ, ಗೋಲ್ಡ್‍ಫಿಂಚ್ ಹೊಟೇಲು ಮತ್ತು ಎಂಆರ್‍ಜಿ ಸಮೂಹದ ಪ್ರವರ್ತಕ ಕೊರಂಗ್ರಪಾಡಿ ಪ್ರಕಾಶ್ ಎಂ.ಶೆಟ್ಟಿ ಇವರ ಜೀವನ ಶೈಲಿ ಮತ್ತು ಆತಿಥ್ಯೋದ್ಯಮ ಕ್ಷೇತ್ರದ ಜೀವಮಾನದ ಸಾಧನೆಗಾಗಿ 2021ರ ಸಾಲಿನ ಟೈಂಸ್ ಬ್ಯುಸಿನೆಸ್ ಅವಾರ್ಡ್ ಪ್ರಾಪ್ತಿಯಾಗಿದೆ.


ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತ ಬಾಲಿವುಡ್ ಚಲನಚಿತ್ರ ನಟ ಸುನೀಲ್ ಶೆಟ್ಟಿ ಅವರು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಕಾಶ್ ಶೆಟ್ಟಿ ಅವರಿಗೆ ನೀಡಿ ಅಭಿನಂದಿಸಿದರು.


ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ

ಪ್ರಕಾಶ್ ಎಂ.ಶೆಟ್ಟಿ ಅವರು ಕೆ. ಮಾಧವ ಶೆಟ್ಟಿ ಮತ್ತು ರತ್ನಾ ಎಂ.ಶೆಟ್ಟಿ ಸುಪುತ್ರರಾಗಿದ್ದು ಎಂಆರ್‍ಜಿ ಸಮೂಹ ರೂಪಿಸಿ ದೇಶವಿದೇಶಗಳಲ್ಲಿ ಹೊಟೇಲು ಉದ್ಯಮ ಪಸರಿಸಿದ ಅನುಭವಿ ಹೊಟೇಲು ಉದ್ಯಮಿ. ಸರಳ ಸಜ್ಜನಿಕೆಯ, ಅಪಾರ ಶಿಕ್ಷಣ ಪ್ರೇಮವುಳ್ಳ ಪ್ರಕಾಶ್ ಓರ್ವ ಕೊಡುಗೈದಾನಿ ಆಗಿಯೂ ಪರಿಚಿತ ಇವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2019ರ ವಾರ್ಷಿಕ ಪ್ರತಿಷ್ಠಿತ, ಸರ್ವೋತ್ಕೃಷ್ಟ ಗೌರವ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು.


ಗಣ್ಯರ ಅಭಿನಂದನೆ-ಶುಭ ಹಾರೈಕೆ:

ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ|ಕಾರ್ಯದರ್ಶಿ ಆರ್.ಕೆ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು, ಸಂಸದ ಗೋಪಾಲ ಸಿ.ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಡಾ| ಶಂಕರ್ ಶೆಟ್ಟಿ ವಿರಾರ್, ಸುಧಾಕರ್ ಎಸ್.ಹೆಗ್ಡೆ, (ತುಂಗಾ ಹೊಟೇಲು ಸಮೂಹ), ಜಯರಾಮ ಎನ್.ಶೆಟ್ಟಿ (ರಿಜೇನ್ಸಿ ಸಮೂಹ) ಸೇರಿದಂತೆ ನೂರಾರು ಗಣ್ಯರು ಅಭಿನಂದಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ