Children drawn in river at Kumble | ಕುಂಬಳೆ: ಸ್ನಾನಕ್ಕಿಳಿದ ಪುಟಾಣಿ ಸಹೋದರರಿಬ್ಬರು ನದಿಪಾಲು
2/01/2021 10:22:00 AM
ಕಾಸರಗೋಡು: ಕುಂಬಳೆ ಸಮೀಪದ ಬಂಬ್ರಾಣ ಎಂಬಲ್ಲಿಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಸಹೋದರರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಇಚ್ಲಂಗೋಡಿನ ಶರೀಫ್ ಎಂಬವರ ಮಕ್ಕಳಾದ ಶದಾದ್ ಮತ್ತು ಶಿಯಾಜ್ ಮೃತಪಟ್ಟ ಸಹೋದರರಾಗಿದ್ದಾರೆ. ಶದಾದ್ ಗೆ 12 ವರ್ಷ ವಯಸ್ಸಾಗಿದ್ದು, ಈತನ ತಮ್ಮ ಶಿಯಾಜ್ 8 ವರ್ಷದ ಬಾಲಕ.
ಇವರು ಬಂಬ್ರಾಣ ಅಣೆಕಟ್ಟು ಸಮೀಪ ಹೊಳೆಯಲ್ಲಿ ತಮ್ಮ ಸ್ನೇಹಿತರ ಜೊತೆ ಈಜಲು ಹೊಳೆಗೆ ಇಳಿದಿದ್ದರು. ಈ ಸಂದರ್ಭ ದುರ್ಘಟನೆ ಸಂಭವಿಸಿದೆ.
ಸಹೋದರರಿಬ್ಬರು ನೀರುಪಾಲಾಗುತ್ತಿದ್ದಂತೆ ಉಳಿದ ಸ್ನೇಹಿತರು ಬೊಬ್ಬೆ ಹಾಕಿದ್ದು, ಕೂಡಲೇ ಸ್ಥಳೀಯರು ಮಕ್ಕಳನ್ನು ರಕ್ಷಿಸಲು ಎಲ್ಲ ಪ್ರಯತ್ನ ನಡೆಸಿದ್ದರು.
ಆದರೆ, ಸುಮಾರು ಎರಡು ಗಂಟೆಗಳ ಕಾರ್ಯ ಅವರನ್ನು ರಕ್ಷಿಸುವ ಪ್ರಯತ್ನ ವಿಫಲವಾಯಿತು. ಸ್ಥಳಕ್ಕೆ ಅಗ್ನಿಶಾಮಕದಳ ಹಾಗು ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದರು.
ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದರು.