accidental death by attending call | ಫೋನ್‌ನಲ್ಲಿ ಮಾತಾಡುತ್ತಿದ್ದ ಯುವಕನ ಆಕಸ್ಮಿಕ ಸಾವು: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ
ತನ್ನ ಮೊಬೈಲ್ ಫೋನ್‌ನಲ್ಲಿ ಮಾತಾಡುತಲೇ ಮೈಮರೆತ ಯುವಕನೊಬ್ಬ ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕು ವಿಟ್ಲದ ಕೇಪು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕೊತ್ತಲಮಜಲು ಗ್ರಾಮಸ್ಥರಾದ ವಿಶ್ವನಾಥ ಆಚಾರ್ಯ ಅವರ ಪುತ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಈತ ವಿಟ್ಲ ಕೇಪು ಕುಕ್ಕೆಬೆಟ್ಟು ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣಗಳ ಕೆಲಸ ಮಾಡಿಕೊಂಡಿದ್ದರು.
ತಡ ರಾತ್ರಿ ವಾಸವಾಗಿದ್ದ ಮನೆಯ ಟೆರೇಸ್ ಮೇಲಿನಿಂದ ಮೊಬೈಲ್‌ನಲ್ಲಿ ಮತಾಡುತ್ತಾ ಮೈಮರೆತು ಆಯತಪ್ಪಿ ಬಿದ್ದು ಈ ಘಟನೆ ಸಂಭವಿಸಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಈತ ಸಾವನ್ನಪ್ಪಿದ್ದಾನೆ.
ತೀರಾ ಬಡ ಕುಟುಂಬಕ್ಕೆ ಸೇರಿದ ಪ್ರಸಾದ್ ಆಚಾರ್ಯ, ತಾಯಿ ಕುಸುಮಾ, ಸಹೋದರಿಯರಾದ ಪವಿತ್ರಾ, ರಾಧಿಕಾ, ಹರ್ಷಲಾ, ರೇಖಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
