-->
World Bunt organisation sponcered Karunya Project | ಎಂ.ಫ್ರೆಂಡ್ಸ್ ಕಾರುಣ್ಯಕ್ಕೆ ಜಾಗತಿಕ ಬಂಟ ಸಂಘಗಳ ಒಕ್ಕೂಟದ ತಿಂಗಳ ಪ್ರಾಯೋಜಕತ್ವ

World Bunt organisation sponcered Karunya Project | ಎಂ.ಫ್ರೆಂಡ್ಸ್ ಕಾರುಣ್ಯಕ್ಕೆ ಜಾಗತಿಕ ಬಂಟ ಸಂಘಗಳ ಒಕ್ಕೂಟದ ತಿಂಗಳ ಪ್ರಾಯೋಜಕತ್ವ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ವತಿಯಿಂದ ಮಂಗಳವಾರ ನಗರದ ಬಂಟ್ಸ್ ಹಾಸ್ಟೆಲ್ ಮೈದಾನದಲ್ಲಿ ನಡೆದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮದಲ್ಲಿ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ "ಕಾರುಣ್ಯ" ಯೋಜನೆಗೆ ಒಂದು ತಿಂಗಳ ಪ್ರಾಯೋಜಕತ್ವದ ಹಣವನ್ನು ನೀಡಲಾಯಿತು. ಇದಕ್ಕೆ ಎರಡು ಲಕ್ಷ ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ ಚೆಕ್ ನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಎಂ. ಫ್ರೆಂಡ್ಸ್ ಪ್ರತಿನಿಧಿಯವರಿಗೆ ಗೌರವಪೂರ್ವಕವಾಗಿ ನೀಡಿದರು.ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯಡಿ ಮಂಗಳೂರಿನ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಶಕ್ತ ರೋಗಿಗಳ ನೂರಾರು ಬಾಂಧವರಿಗೆ ದಿನನಿತ್ಯ ರಾತ್ರಿಯ ಊಟವನ್ನು ಕಳೆದ 3 ವರ್ಷಗಳಿಂದ ಉಚಿತವಾಗಿ ನೀಡಲಾಗುತ್ತಿದೆ.ಈ ಯೋಜನೆಗೆ ಪ್ರತಿವರ್ಷ ಜಾಗತಿಕ ಬಂಟರ ಸಂಘ ಒಂದು ತಿಂಗಳ ಖರ್ಚು ವೆಚ್ಚವನ್ನು ವಹಿಸಿಕೊಂಡಿದೆ. ಎಂ.ಫ್ರೆಂಡ್ಸ್ ಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಅವರನ್ನು ಶಾಲು ಹೊದಿಸಿ ಗೌರವಿಸಿ ಈ ಕುರಿತ ನೆರವಿನ ಚೆಕ್ ನ್ನು ಐಕಳ ಹರೀಶ್ ಶೆಟ್ಟಿ ಅವರು ನೀಡಿದರು.ಈ ಸಂದರ್ಭ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್, ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನೀರೆ ವಿಶ್ವನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಎಂ.ಫ್ರೆಂಡ್ಸ್ ಟ್ರಸ್ಟಿ ಅತ್ತೂರು ಹಮೀದ್, ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಸದಸ್ಯರಾದ ಮಹಮ್ಮದ್ ಟಿ.ಕೆ. ಈ ಸಂದರ್ಭ ಉಪಸ್ಥಿತರಿದ್ದರು.


 

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg