-->
Hall in Kaithrodi | ಕೈತ್ರೋಡಿ: ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಕಿರು ಸಭಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ

Hall in Kaithrodi | ಕೈತ್ರೋಡಿ: ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಕಿರು ಸಭಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ

ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಕಳೆದ 26 ವರ್ಷಗಳಿಂದ ಕಟೀಲು ಮೇಳದಿಂದ ಸಾರ್ವಜನಿಕ ಯಕ್ಷಗಾನ ಬಯಲಾಟ ಮತ್ತು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ವತಿಯಿಂದ 'ಕಿರು ಸಭಾಂಗಣ' ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದ ಅರ್ಚಕ ನಾಗೇಶ ಹೊಳ್ಳ ಮಾತನಾಡಿ, 'ಪ್ರತೀ ವರ್ಷ ಯಕ್ಷಗಾನ ಕಲಾವಿದರಿಗೆ ಉಳಿದುಕೊಳ್ಳಲು ಅವಕಾಶ ನೀಡುವುದರ ಜೊತೆಗೆ ವಿವಿಧ ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು.ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಸದಸ್ಯೆ ನಿರುಪಮಾ ಎಸ್. ಭಂಡಾರಿ, ಪ್ರಮುಖರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ಹರೀಶ ಶೆಟ್ಟಿ, ಆನಂದ ಟೈಲರ್, ಗಂಗಾಧರ ಸುವರ್ಣ, ಜಯ ಪೂಜಾರಿ, ಲೋಕೇಶ ಕೈತ್ರೋಡಿ ಕ್ವಾರ್ಟಸ್ ್, ಯಶೋಧರ ರೈ ದೇರಾಜೆ, ಪ್ರಶಾಂತ ರೈ, ದಾಮೋದರ ಆಚಾರ್ಯ, ದೇವಿಪ್ರಸಾದ್, ಹರೀಶ ಪೂಜಾರಿ, ವಸಂತ ಪೂಜಾರಿ, ರಮೇಶ ಆಚಾರ್ಯ, ಅಶೋಕ ಅಟ್ಲೊಟ್ಟು, ಸುರೇಶ ಆಚಾರ್ಯ, ದಾಮೋದರ ಮಡಿವಾಳ, ಸತೀಶ ಬಾಡಬೆಟ್ಟು, ಲೋಕೇಶ ಶೆಟ್ಟಿ ಕಂಬಳದಡ್ಡ, ಭಾಸ್ಕರ, ಪರಮೇಶ್ವರ ಪೂಜಾರಿ, ರಾಮಸುಂದರ ಗೌಡ ಮತ್ತಿತರರು ಇದ್ದರು. ಮೋಹನ್ ಕೆ.ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.


Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg