ಸುರತ್ಕಲ್: ಬಾರ್‌ನಲ್ಲಿ ವಾಗ್ವಾದ ಇಬ್ಬರಿಗೆ ಚೂರಿ ಇರಿತ
ಸುರತ್ಕಲ್: ಬಾರ್‌ನಲ್ಲಿ ವಾಗ್ವಾದ ಇಬ್ಬರಿಗೆ ಚೂರಿ ಇರಿತ
ಸುರತ್ಕಲ್: ಇಲ್ಲಿನ ದೀಪಕ್ ಬಾರ್‌ನಲ್ಲಿ ವಾಗ್ವಾದ ನಡೆದು ಇಬ್ಬರಿಗೆ ನಾಲ್ವರು ಅಪರಿಚಿತರು ಚೂರಿಯಿಂದ ಇರಿದ ಘಟನೆ ಗುರುವಾರ ರಾತ್ರಿ 11ಗಂಟೆ ಸುಮಾರಿಗೆ ನಡೆದಿದೆ.
ಮುರ್ಷಿದ್, ನಿಝಾಮ್ ಹಾಗೂ ಮತ್ತಿಬ್ಬರು ಸುರತ್ಕಲ್ನ ದೀಪಕ್ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದರು. ಅಲ್ಲಿಗೆ ಬಂದ ಪಾನಮತ್ತರಾದ ನಾಲ್ವರು ಅಪರಿಚಿತರು ಅವರೊಂದಿಗೆ ವಾಗ್ವಾದ ಬೆಳೆಸಿದ್ದಾರೆ. ಎರಡೂ ಕಡೆಯವರು ಬಾರ್‌ನಿಂದ ಹೊರಗೆ ಹೋದ ಬಳಿಕ ಅದು ಮುಂದುವರೆದಿದೆ. ಆಗ ಅಪರಿಚಿತರಲ್ಲಿ ಓರ್ವ ಆರೋಪಿ ಚಾಕುವನ್ನು ತೆಗೆದುಕೊಂಡು (ಫ್ಲೆಕ್ಸ್‌ಗಳನ್ನು ಕತ್ತರಿಸಲು ಬಳಸುವ ಚಾಕು) ಮುರ್ಷಿದ್ ಹೊಟ್ಟೆ ಮತ್ತು ಕಿವಿಯ ಬಳಿ ಇರಿದಿದ್ದಾನೆ. ಈ ವೇಳೆ ನಿಜಾಮ್ನ ಕೈಗೂ ಗಾಯವಾಗಿದೆ. ಗಾಯವು ಆಳವಾಗಿಲ್ಲದ ಕಾರಣ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ 307 ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ ರಾತ್ರಿಯೇ ತಂಡ ಆರೋಪಿಗಳ ಪತ್ತೆಗೆ ತನಿಖೆ ನಡೆಸಿದ ಪೊಲೀಸರು ಬಜರಂಗದಳದ ಕಾರ್ಯಕರ್ತ, ರೌಡಿಶೀಟರ್ ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್, ನಿತಿನ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು.
ಆರೋಪಿಗಳ ಅಡಗುತಾಣಕ್ಕೆ ರಚಿಸಲಾದ ತಂಡಗಳು ರಾತ್ರಿಯೇ ದಾಳಿ ನಡೆಸಿತ್ತು. ಆದರೆ ಪೊಲೀಸರು ಅಷ್ಟರಲ್ಲಾಗಲೇ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸ್ ತಂಡ ತನಿಖೆ ಮುಂದುವರಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
