ಕಾರಿನಲ್ಲಿ ಸಾಕಾಗಿಲ್ಲವೆಂದು ನಡುರಸ್ತೆಯಲ್ಲಿಯೇ ಮಹಿಳೆಯಿಂದಿಗೆ ಲೈಂಗಿಕ ಕ್ರಿಯೆ- ಬಿಜೆಪಿ ಮುಖಂಡನ ವೀಡಿಯೋ ವೈರಲ್
ಮಂಡಸೌರ್: ಮಧ್ಯಪ್ರದೇಶ ರಾಜ್ಯದ ಮಂಡಸೌರ್ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್ ಎಂಬಾತ ಮಹಿಳೆಯೊಂದಿಗೆ ನಡುರಸ್ತೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ನಾಚಿಕೆ ಇಲ್ಲದ ಈತನ ವರ್ತನೆಗೆ ಜನ ಛೀ.. ಥೂ... ಎಂದು ಉಗಿಯುತ್ತಿದ್ದಾರೆ.
ಮಹಿಳೆಯೊಂದಿಗಿದ್ದ ಮನೋಹರ್ ಲಾಲ್ ಧಕಡ್, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಅದು ಸಾಲದು ಎಂಬುದಕ್ಕೆ ಕಾರಿನಿಂದ ಇಳಿದು ಹೆದ್ದಾರಿಯಲ್ಲೇ ಸಾರ್ವಜನಿಕವಾಗಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈತನ ಕೃತ್ಯ ಹೆದ್ದಾರಿಯಲ್ಲಿ ಅಳವಡಿಸಲಾದ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಇದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.
ಮೊದಲು ಕಾರಿನಿಂದ ಓರ್ವ ಮಹಿಳೆ ಬಟ್ಟೆ ಇಲ್ಲದೆ ಹೊರಬರುತ್ತಾಳೆ. ಬಳಿಕ ಧಕಡ್ ಕೂಡ ಅರ್ಧ ಪ್ಯಾಂಟ್ ಬಿಚ್ಚಿಕೊಂಡು ಹೊರಬರುತ್ತಾನೆ. ಬಳಿ ಕನಡು ರಸ್ತೆಯಲ್ಲೇ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾನೆ. ಈ ವಿಡಿಯೋ 8ನೇ ಲೇನ್‌ನಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 8 ಲೇನ್‌ನದ್ದಾಗಿದೆ ಹಾಗೂ ಇದು ಹೆದ್ದಾರಿಯಲ್ಲಿ ಅಳವಡಿಸಲಾದ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ವೈರಲ್ ಬೆನ್ನಲ್ಲೇ ಆತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಿಡಿಯೋದಲ್ಲಿ ಧಕಡ್ ಕಾಣಿಸಿಕೊಂಡಿರುವ ಬಿಳಿ ಕಾರಿನ ನೋಂದಣಿ ಸಂಖ್ಯೆ ಎಂಪಿ 14, ಸಿಸಿ 4782 ಆಗಿದ್ದು, ಇದು ಮನೋಹರ್ ಲಾಲ್ ಧಕಡ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಈ ನಡುವೆ ಧಕಡ್ ಮಹಾಸಭಾ ಎಂಬ ಸಂಘಟನೆಯಿಂದ ಮನೋಹರ್ ಲಾಲ್ ಧಕಡ್‌ನನ್ನು ವಜಾ ಮಾಡಲಾಗಿದೆ.