
ಪುತ್ತೂರು: ಪೊಲೀಸ್ ಜೀಪಿಗೆ ಢಿಕ್ಕಿಪಡಿಸಿ ಕೊಲೆಗೆ ಯತ್ನ- ಜಾನುವಾರು ಸಾಗಾಟದ ಆರೋಪಿ ಕಾಲಿಗೆ ಶೂಟೌಟ್!
ಪುತ್ತೂರು: ಪೊಲೀಸ್ ಜೀಪಿಗೆ ಢಿಕ್ಕಿಪಡಿಸಿ ಕೊಲೆಗೆ ಯತ್ನ- ಜಾನುವಾರು ಸಾಗಾಟದ ಆರೋಪಿ ಕಾಲಿಗೆ ಶೂಟೌಟ್!
ಪುತ್ತೂರು: ಜಾನುವಾರು ಸಾಗಾಟ ಆರೋಪಿಯೋರ್ವನು ಬೆನ್ನಟ್ಟಿದ್ದ ಪೊಲೀಸ್ ಜೀಪಿಗೆ ಡಿಕ್ಕಿ ಪಡಿಸಿ ಕೊಲೆಗೆ ಯತ್ನಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಎಂಬಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಕೇರಳ ರಾಜ್ಯದ ಕಾಸರಗೋಡು ಮೂಲದ ಅಬ್ದುಲ್ಲಾ (40) ಜಾನುವಾರು ಸಾಗಾಟದ ಆರೋಪಿ.
ಅಬ್ದುಲ್ಲಾ ಹಾಗೂ ಮತ್ತೋರ್ವ ಆರೋಪಿಯು ಐಚರ್ ವಾಹನದಲ್ಲಿ 10 ಜಾನುವಾರಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದ. ಇವರು ನೆಟ್ಟಣಿಗೆ ಮೂಡ್ನೂರು ಚಳ್ಳಿಚಡವು ಒಳ ರಸ್ತೆಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುವ ಯತ್ನದಲ್ಲಿದ್ದರು. ಅಬ್ದಲ್ಲಾ ವಾಹನ ಚಾಲಕ ಸೀಟ್‌ನಲ್ಲಿದ್ದ. ಈ ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆಗ ಆತನು ನಿಲ್ಲಿಸದೆ ವಾಹನವನ್ನು ವೇಗಗೊಳಿಸಿದ್ದಾನೆ. ಪೊಲೀಸ್‌ರು ಸುಮಾರು 10 ಕಿ.ಮೀ. ದೂರ ವಾಹನವನ್ನು ಬೆನ್ನಟ್ಟಿದರು. ಆಗ ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತಾನೆ.
ಆಗ ಪಿಎಸ್ಐ ಜಂಬುರಾಜ್ ಎರಡು ಸುತ್ತು ಗುಂಡುಗಳನ್ನು ಫೈಯರ್ ಮಾಡಿದ್ದಾರೆ. ಒಂದು ಐಚರ್ ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿರುತ್ತದೆ. ಘಟನೆಯ ಸಮಯದಲ್ಲಿ ಇನ್ನೊಬ್ಬ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಸ್ಥಳಕ್ಕೆ ಎಸ್ಪಿ ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಲಾಗುವುದು. ಈತನ ಮೇಲೆ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 33/2025 ಗೋಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.