ತರವಾಡು ತುಳು ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ
Wednesday, July 2, 2025
ಮಂಗಳೂರು: ಶುಭಾ ಶೆಟ್ಟಿ ಪ್ರೊಡಕ್ಷನ್ ಲಾಂಛನದಡಿಯಲ್ಲಿ ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದಲ್ಲಿ ಧನರಾಜ್ ಉಮೇಶ್ ಶೆಟ್ಟಿ ನಿರ್ಮಾಣದಲ್ಲಿ ತಯಾರಾದ ತರವಾಡ್ ತುಳು ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ಮಂದಿರದಲ್ಲಿ ನಡೆಯಿತು.
ಸಮಾರಂಭವನ್ನು ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಪ್ರಕಾಶ್ ಪಾಂಡೇಶ್ವರ್ ಉದ್ಘಾಟಿಸಿದರು.
ತುಳುವಿನಲ್ಲಿ ವಿಭಿನ್ನ ಕತೆಯನ್ನು ಒಳಗೊಂಡ ತರವಾಡ್ ಸಿನಿಮಾಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದರು. ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ತುಳುವಿನಲ್ಲಿ ತೆರೆಕಾಣುವ ಎಲ್ಲಾ ಸಿನಿಮಾಗಳಿಗೂ ಪ್ರೇಕ್ಷಕರ ಪ್ರೋತ್ಸಾಹ ಇರಲಿ ಎಂದರು.
ಸಮಾರಂಭದಲ್ಲಿ ಸಂತೋಷ್ ಶೆಟ್ಟಿ ಪಲ್ಲವಿ, ಗೋಪಿನಾಥ ಭಟ್, ಬಿಕೆ ಶೆಟ್ಟಿ ಮಿಥುನ್ ಹೆಗ್ಡೆ, ನವೀನ್ ಚಂದ್ರ ಜೆ ಶೆಟ್ಟಿ, ಸಂಜಯ್ ಶೆಟ್ಟಿ, ವಿಠಲ್ ಶೆಟ್ಟಿ ಕನಕಪಾಡಿ, ಗುರು ಶೆಟ್ಟಿ, ಪ್ರಸನ್ನ ಶೆಟ್ಟಿ, ಅನಿಲ್ ರಾಜ್ ಉಪ್ಪಲ, ನಿತಿನ್ ರೈ ಕುಕ್ಕುವಳ್ಳಿ, ಭರತ್ ಶೆಟ್ಟಿ, ದೇವರಾಜ ಶೆಟ್ಟಿ, ಪಿಬಿ ಹೆಗ್ಡೆ, ಶ್ರೀನಾಥ್ ಹೆಗ್ಡೆ, ನವೀನ್ ಎನ್ ಶೆಟ್ಟಿ, ಉಮೇಶ್ ಶೆಟ್ಟಿ, ಧನರಾಜ್ ಶೆಟ್ಟಿ, ಅಶೋಕ್ ಶೆಟ್ಟಿ ಸುಜ್ಲಾನ್, ಡಾ ನವೀನ್ ಶೆಟ್ಟಿ ಕೆ, ನಾಯಕ ನಟ ಶೋಧನ್ ಶೆಟ್ಟಿ, ನಿರ್ದೇಶಕ ಶರತ್ ಎಸ್ ಪೂಜಾರಿ ಬಗ್ಗತೋಟ ಮತ್ತು ಕಲಾವಿದರು ಉಪಸ್ಥಿತರಿದ್ದರು.
ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ರವಿ ರಾಮಕುಂಜ, ಮೋಹನ್ ಶೇಣಿ, ಗೋಪಿನಾಥ್ ಭಟ್, ಅನಿಲ್ ಉಪ್ಪಳ, ವಿನಾಯಕ್ ಜೆಪ್ಪು, ಶೋಭಾ ನಯ್ಯರ್, ನಿಧಿ ಮೊದಲಾದವರು ಅಭಿನಯಿಸಿದ್ದಾರೆ. ಕ್ಯಾಮರಾ ಸಂದೀಪ್ ಉಡುಪಿ, ಸಂಗೀತ ಪ್ರಸಾದ್ ಶೆಟ್ಟಿ.