ಆಸ್ಪತ್ರೆಯಲ್ಲಿ ಎಲ್ಲರೆದುರೇ ವಿದ್ಯಾರ್ಥಿನಿ ಮೈಮೇಲೆ ಕುಳಿತು ಕತ್ತು ಸೀಳಿದ ಯುವಕ
ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಭಯಾನಕ ಘಟನೆ ನಡೆದಿದೆ. ಅಭಿಷೇಕ್ ಎಂಬ ಯುವಕ ವಿದ್ಯಾರ್ಥಿನಿಯೊಬ್ಬಳ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಯ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಅಲ್ಲಿದ್ದ ಜನರು ಏನೂ ಮಾಡದೆ ನೋಡುತ್ತಲೇ ನಿಂತಿದ್ದರು. ಆಸ್ಪತ್ರೆಯ ನೆಲದ ಮೇಲೆ ರಕ್ತದ ಕೋಡಿ ಹರಿದು ಭಯಾನಕ ದೃಶ್ಯ ಸೃಷ್ಟಿಯಾಗಿತ್ತು. ಆದರೆ ಯಾರೂ ಸಹಾಯಕ್ಕೆ ಧಾವಿಸಿರಲಿಲ್ಲ. ರೋಗಿಗಳನ್ನು ಗುಣಪಡಿಸಬೇಕಿದ್ದ ಆಸ್ಪತ್ರೆ ಪ್ರಾಣ ತೆಗೆಯುವ ಕಸಾಯಿಖಾನೆಯಾಗಿ ಮಾರ್ಪಟ್ಟಂತೆ ಭಾಸವಾಯಿತು.
ಘಟನೆಯ ವಿವರ
ಘಟನೆ ಸಮಯದಲ್ಲಿ ಟ್ರಾಮಾ ಸೆಂಟರ್ ಹೊರಗೆ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಒಳಗೆ ವೈದ್ಯರು, ದಾದಿಯರು, ವಾರ್ಡ್ ಬಾಯ್ಸ್ ಸೇರಿದಂತೆ ಹಲವಾರು ಸಿಬ್ಬಂದಿಗಳಿದ್ದರೂ, ಯಾರೂ ಆತನನ್ನು ತಡೆಯಲು ಮುಂದಾಗಲಿಲ್ಲ. ವಾರ್ಡ್‌ನಲ್ಲಿ ದಾಖಲಾಗಿದ್ದ 11 ರೋಗಿಗಳಲ್ಲಿ ಎಂಟು ಮಂದಿ ಘಟನೆಯ ದಿನವೇ ಡಿಸ್ಚಾರ್ಜ್ ಆಗಿದ್ದು, ಉಳಿದವರು ಮರುದಿನ ಬೆಳಗ್ಗೆ ಹೊರಟಿದ್ದರು. ವಿದ್ಯಾರ್ಥಿನಿ ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಟಿದ್ದಳು. ಆಸ್ಪತ್ರೆಯಲ್ಲಿ ಹೆರಿಗೆ ವಾರ್ಡ್‌ನಲ್ಲಿರುವ ಸ್ನೇಹಿತನ ಅತ್ತಿಗೆಯನ್ನು ಭೇಟಿಯಾಗುವುದಾಗಿ ತಿಳಿಸಿ ಹೋಗಿದ್ದಳು.
ಆರೋಪಿ ಮತ್ತು ಘಟನೆ
ಅಭಿಷೇಕ್ ಮಧ್ಯಾಹ್ನದಿಂದ ಆಸ್ಪತ್ರೆಯ ಸುತ್ತಮುತ್ತಲೂ ಓಡಾಡುತ್ತಿದ್ದನು. ಬಳಿಕ ಈ ಭಯಾನಕ ಕೃತ್ಯಕ್ಕೆ ಮುಂದಾಗಿದ್ದಾನೆ. ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿಲ್ಲದಂತೆ ಈ ಘಟನೆ ಸೂಚಿಸುತ್ತದೆ. ಆಕೆಯ ಕುಟುಂಬದವರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.