-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಮಿಳುನಾಡಿನಲ್ಲಿ ಮೀನುಗಾರರ ಬಲೆಗೆ ಬಿತ್ತು ಹಾವನ್ನು ಹೋಲುವ 30ಅಡಿ ಉದ್ದದ ಮೀನು- ಇದು ಕಾಣಿಸಿಕೊಂಡ್ರೆ ಪ್ರಾಕೃತಿಕ ವಿಕೋಪ ಖಂಡಿತಾ

ತಮಿಳುನಾಡಿನಲ್ಲಿ ಮೀನುಗಾರರ ಬಲೆಗೆ ಬಿತ್ತು ಹಾವನ್ನು ಹೋಲುವ 30ಅಡಿ ಉದ್ದದ ಮೀನು- ಇದು ಕಾಣಿಸಿಕೊಂಡ್ರೆ ಪ್ರಾಕೃತಿಕ ವಿಕೋಪ ಖಂಡಿತಾ

ಚೆನ್ನೈ: ಹಾವನ್ನು ಹೋಲುವ ಅಪರೂಪದಲ್ಲೇ ಅಪರೂಪದ ಜಲಚರವೊಂದು ತಮಿಳುನಾಡಿನ ಮೀನುಗಾರರು ಬಲೆಗೆ ಬಿದ್ದಿದೆ‌. ಈ ಮಾದರಿಯ ಮೀನನ್ನು ನೋಡಿ ಮೀನುಗಾರರೇ ಬೆಚ್ಚಿಬಿದ್ದಿದ್ದಾರೆ. ಬೆಳ್ಳಗೆ ಮಿನುಗುವ ಈ ಮೀನು 30ಅಡಿ ಉದ್ದವಿದ್ದು ಸಮುದ್ರದಾಳದಲ್ಲಿ ಮಾತ್ರ ಇರುವ ಇದು ಮೀನುಗಾರರ ಬಲೆಗೆ ಸಿಲುಕಿ ದಡಕ್ಕೆ ಬಂದಿದ್ದೇ ಸೋಜಿಗ ಎನ್ನಲಾಗುತ್ತಿದೆ.

ಇಂಗ್ಲೀಷ್‌ನಲ್ಲಿ oarfish ಎಂದು ಕರೆಯಲ್ಪಡುವ ಈ ಮೀನನ್ನು ಜಪಾನ್‌ನಲ್ಲಿ ಪ್ರಳಯ ಮೀನು ಎಂದು ಕರೆಯುತ್ತಾರಂತೆ. ಸಮುದ್ರ ಮೇಲ್ಮೈಯಲ್ಲಿ ಈ ಮೀನು ಕಾಣಿಸಿಕೊಳ್ಳುವುದು ಅತ್ಯಂತ ವಿರಳ. ಕಾಣಿಸಿದೆ ಎಂದರೆ ಜಗತ್ತಿಗೆ ಏನೋ ಗಂಡಾಂತರ ಕಾಡಿದೆ ಅನ್ನೋ ಮುನ್ಸೂಚನೆಯಂತೆ. ಇದೇ ಕಾರಣಕ್ಕೆ ಈ ಮೀನನ್ನು ಡೂಮ್ಸ್ ಡೇ (ಪ್ರಳಯ ದಿನ) ಮೀನು ಎಂದು ಕರೆಯುತ್ತಾರೆ. ಜಪಾನ್, ಫಿಲಿಪೈನ್ಸ್ ಜನರ ನಂಬಿಕೆಯ ಪ್ರಕಾರ, ಈ ಮೀನು ಕಂಡರೆ ಭಾರೀ ದೊಡ್ಡ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದೆ. ಹೀಗಾಗಿ ಈ ಮೀನಿಗೆ 'ಡೂಮ್ಸ್ ಡೇ' ಎಂಬ ಹೆಸರು ಬಂದಿದ್ದು ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಮೀನು ಸಿಕ್ಕಿತೆಂದರೆ ಪ್ರಪಂಚದಲ್ಲಿ ಎಲ್ಲಾದರೂ ಪ್ರಳಯ, ಭೂಕಂಪ ಮಾದರಿಯ ಪ್ರಕೃತಿ ವಿಕೋಪ ನಡೆಯುತ್ತದೆ ಎಂಬ ನಂಬಿಕೆಯಿದೆ. ಜಪಾನ್ ಜನರು, ದೇವರೇ ಮೀನಿನ ರೂಪದಲ್ಲಿ ಬಂದು ನಮಗೆ ಎಚ್ಚರಿಕೆ ನೀಡುತ್ತಾನೆ ಎಂದು ನಂಬಿದ್ದಾರೆ. ಹೊಳೆಯುವ ಮೀನಿನಂತೆ ಕಂಡರೂ ಉದ್ದಕ್ಕೆ ಇದ್ದಂತೆ ಕಾಣಿಸುತ್ತದೆ. ಜಪಾನ್ ದೇಶದ ಜನಪದ ಕತೆಗಳಲ್ಲಿ 'Ryugu No Sukai' (ಸಮುದ್ರ ದೇವನ ದೂತ) ಎಂದು ಕರೆಯುತ್ತಾರೆ. ಮೇ 30 ರಂದು ಈ ಮೀನು ದೊರಕಿದ್ದು, ಇದರ ಫೋಟೊ ವೀಡಿಯೋ ಜಾಲತಾಣಗಳಲ್ಲಿ ಹರಿದಾಡಿವೆ.

ಜಪಾನ್ ನಂಬಿಕೆಯಂತೆ, 2011ರಲ್ಲಿ ನಡೆದ ತೊಹೊಕು ಭೂಕಂಪಕ್ಕೂ ಮುನ್ನ 20 ಈ ರೀತಿಯ ಮೀನುಗಳು ಕಾಣಸಿಕ್ಕಿದೆಯಂತೆ. ಫಿಲಿಪೈನ್ಸ್ ನಲ್ಲಿ 2017 ರಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದಾಗಲೂ ಈ ಮೀನುಗಳು ಬಂದಿವೆ. ಮೆಕ್ಸಿಕೋದಲ್ಲಿಯೂ ಭೂಕಂಪ, ಸುನಾಮಿ ಸಂಭವಿಸಿದಾಗ ಈ ಮೀನು ಕಾಣಸಿಕ್ಕಿದೆ. ಇದು ಪ್ರಕೃತಿ ವಿಕೋಪದ ಮುನ್ಸೂಚನೆ ಎನ್ನುವ ನಂಬಿಕೆಯನ್ನು ಗಟ್ಟಿಗೊಳಿಸಿದೆ. ಆದರೆ 2019ರಲ್ಲಿ ಅಮೆರಿಕದ ಭೂಕಂಪ ತಜ್ಞರು ಈ ಬಗ್ಗೆ ಹಿಂದಿನ ಎಲ್ಲಾ ಪ್ರಾಕೃತಿಕ ವಿಕೋಪಗಳನ್ನು ಅಧ್ಯಯನ ಮಾಡಿದ ವರದಿಯಲ್ಲಿ ಓರ್ ಫಿಶ್ ಅನಾಹುತ ಮುನ್ಸೂಚಕ ಮೀನು ಎಂಬ ವಾದವನ್ನು ನಿರಾಕರಿಸಿದ್ದಾರೆ.
ಓರ್ಫಿಶ್ ಸಾಮಾನ್ಯವಾಗಿ ಸಮುದ್ರದ ಆಳದಲ್ಲಿ ಅಂದರೆ, ಸುಮಾರು 700 ರಿಂದ 3,280 ಅಡಿಯಲ್ಲಿ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈಯಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಸಮಸ್ಯೆಯಾದಾಗ ಮಾತ್ರ ಹೊರಗೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದೇ ವೇಳೆ ಸಮುದ್ರದ ಅಡಿಯಲ್ಲಿ ಆಗುವ ಬದಲಾವಣೆ, ಅದರಿಂದ ಉಂಟಾಗುವ ಒತ್ತಡಗಳಿಂದ ಈ ಮೀನುಗಳು ಮೇಲ್ಮಗೆ ಬರುತ್ತವೆ.
ಸುರ

Ads on article

Advertise in articles 1

advertising articles 2

Advertise under the article