ಬಂಟ್ವಾಳ: ಮಾರಕಾಯುಧದಿಂದ ಕಡಿದು ಯುವಕನ ಬರ್ಬರ ಹತ್ಯೆ, ಮತ್ತೋರ್ವನಿಗೆ ಗಾಯ
Tuesday, May 27, 2025
ಬಂಟ್ವಾಳ: ಮಾರಕಾಯುಧದಿಂದ ಕಡಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಂಟ್ವಾಳದ ಕುರಿಯಾಳದ ಕಾಂಬೋಡಿಯ ಇರಾಕೋಡಿಯಲ್ಲಿ ನಡೆದಿದೆ.
ಕೊಲ್ತಮಜಲು ನಿವಾಸಿ ರಹೀಂ ಎಂಬಾತ ಹತ್ಯೆಯಾದ ಯುವಕ.
ರಹೀಂ ಪಿಕಪ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಯುಧದಿಂದ ದಾಳಿ ನಡೆಸಿ ರಹೀಂನನ್ನು ಕಡಿದು ಪರಾರಿಯಾಗಿದ್ದಾರೆ. ರಹೀಂ ಜತೆಗಿದ್ದ ಯುವಕನೂ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.