ತಾನು ಡಿ.ಕೆ.ಸುರೇಶ್‌ ಪತ್ನಿ ಎಂದು ವೀಡಿಯೋ ಹರಿಯಬಿಟ್ಟ ಮಹಿಳೆ



ರಾಮನಗರ: ಮಾಜಿ ಸಂಸದ ಡಿ.ಕೆ.ಸುರೇಶ್‌ರವರ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹರಿಯಬಿಟ್ಟಿದ್ದಾರೆ.

ಮೊದಲು ತಾನು ಡಿ.ಕೆ.ಸುರೇಶ್ ಅವರ ಪತ್ನಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂ.ಪಿ.ಯಾಗಿ ಯಾರೂ ಮಾಡಲು ಆಗದ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಪತಿ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ ಎಂದು ಆಕೆ ವಿಡಿಯೊದಲ್ಲಿ ಹೇಳಿದ್ದಾರೆ. 

ನಾನು ಕೆಲವು ಸಭೆ ಸಮಾರಂಭಗಳಿಗೆ ಹೋಗುತ್ತಿರುತ್ತೇನೆ. ಆದರೆ ಸರಳವಾಗಿ ಹೋಗುತ್ತೇನೆ‌. ಆಗ ಎಲ್ಲರೂ ನನ್ನ ಪ್ರಶ್ನಿಸುತ್ತಾರೆ, ನೀವು ಡಿ.ಕೆ. ಸುರೇಶ್ ಅವರ ಪತ್ನಿ ಅಲ್ಲವೇ,? ಯಾಕೆ ಇಷ್ಟೊಂದು ಸಿಂಪಲ್ ಆಗಿ ಬಂದಿದ್ದೀರಾ? ಎಂದು ಕೇಳುತ್ತಾರೆ. ಜನರಿಗೆ ಸ್ಟೇಟಸ್ ಬೇಕು, ಹಾಗಾಗಿ ನಾನು ರಾಯಲ್ ಆಗಿ ಇರಲು ಬಯಸುತ್ತೇನೆ ಎಂದು ವಿಡಿಯೋ ಮಾಡಿ ಫೇಸ್ ಬುಕ್‌ನಲ್ಲಿ ಹರಿ ಬಿಟ್ಟಿದ್ದಾರೆ. 

ಈ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ, ಎ.8ರಂದು ವೀಡಿಯೊ ಪೋಸ್ಟ್ ಮಾಡಿದ್ದಾರೆ. ಸುರೇಶ್ ಪರ ವಕೀಲ ಪ್ರದೀಪ್ ಅವರು ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ.

ರಾಮನಗರದ ಸಿಇಎನ್ ಪೊಲೀಸ್‌ ಠಾಣೆಗೆ ಮಹಿಳೆ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸುರೇಶ್ ಅವರ ಪತ್ನಿ ಎಂದು ದುರುದ್ದೇಶದಿಂದ ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆ ಸಹ ದುರುಪಯೋಗಪಡಿಸಿ ಕೊಂಡಿದ್ದಾರೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu