-->

ಪವರ್ ಲಿಫ್ಟಿಂಗ್‌: ಆಳ್ವಾಸ್ ಸತತ 24ನೇ ಬಾರಿ ಸಮಗ್ರ ಪ್ರಶಸ್ತಿ; ಪುರುಷ, ಮಹಿಳಾ ವಿಭಾಗದಲ್ಲಿ ನಿರಂತರ ಪ್ರಾಬಲ್ಯ

ಪವರ್ ಲಿಫ್ಟಿಂಗ್‌: ಆಳ್ವಾಸ್ ಸತತ 24ನೇ ಬಾರಿ ಸಮಗ್ರ ಪ್ರಶಸ್ತಿ; ಪುರುಷ, ಮಹಿಳಾ ವಿಭಾಗದಲ್ಲಿ ನಿರಂತರ ಪ್ರಾಬಲ್ಯ

ಪವರ್ ಲಿಫ್ಟಿಂಗ್‌: ಆಳ್ವಾಸ್ ಸತತ 24ನೇ ಬಾರಿ ಸಮಗ್ರ ಪ್ರಶಸ್ತಿ; ಪುರುಷ, ಮಹಿಳಾ ವಿಭಾಗದಲ್ಲಿ ನಿರಂತರ ಪ್ರಾಬಲ್ಯ





ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಬ್ರಹ್ಮಾವರದ SMS ಕಾಲೇಜಿನ ಆಶ್ರಯದಲ್ಲಿ ಮೇ 23 ರಿಂದ 24ರವರೆಗೆ ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು ಸತತ 24ನೇ ಬಾರಿ ಪುರುಷ ಹಾಗೂ ಮಹಿಳಾ ಎರಡು ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದು ಸಮಗ್ರ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು.


ಮಹಿಳಾ ವಿಭಾಗದಲ್ಲಿ 4 ಚಿನ್ನ, 3 ಬೆಳ್ಳಿ ಪುರುಷರ ವಿಭಾಗದಲ್ಲಿ 4 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆಯುವುದರೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ಮಹಿಳಾ ವಿಭಾಗದ 47 ಕೆಜಿ ದೇಹತೂಕ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಶ್ರಾವ್ಯ ಚಿನ್ನ, ಚಂದ್ರಿಕ ಬೆಳ್ಳಿ, ಅನುಷಾ ಚಿನ್ನ, ಸೀಮಾ ಚಿನ್ನ, ಮಲ್ಲಮ್ಮ ಬೆಳ್ಳಿ, ವಿತಶ್ರೀ ಬೆಳ್ಳಿ ಮತ್ತು ನಾಗಶ್ರೀ ಚಿನ್ನದ ಪದಕವನ್ನು ಗಳಿಸಿದ್ದಾರೆ.


ಪುರುಷರ ವಿಭಾಗದಲ್ಲಿ ವಿದ್ಯಾರ್ಥಿ ಹಾಲೇಶ್ ಚಿನ್ನ, ರಮೇಶ್ ಬೆಳ್ಳಿ, ಸಂತೋಷ್ ಚಿನ್ನ, ಗಣೇಶ್ ಕಂಚು, ಪ್ರತ್ಯುಶ್ ಬೆಳ್ಳಿ, ಶಶಾಂಕ್ ಕಂಚು, ನಾಗೇಂದ್ರ ಅಣ್ಣಪ್ಪ ಚಿನ್ನ ಮತ್ತು ಜೋಶುವ ರಾಜಕುಮಾರ್ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.


ಮಹಿಳಾ ವಿಭಾಗದಲ್ಲಿ `ಕೂಟದ ಬೆಸ್ಟ್ ಲಿಫ್ಟರ್ ವೈಯಕ್ತಿಕ ಪ್ರಶಸ್ತಿ'ಯನ್ನು ಆಳ್ವಾಸ್ ಕಾಲೇಜಿನ ನಾಗಶ್ರೀ ಪಡೆದುಕೊಂಡಿದ್ದಾರೆ.


ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article