ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ - ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ


ಪಾಟ್ನ: ಕಳೆದ ವರ್ಷ ನಡೆದಿರುವ ಕೋಮು ಸಂಘರ್ಷದ ಬಳಿಕ ಗ್ರಾಮದ ಮುಸ್ಲಿಂ ವರ್ತಕ ಗ್ರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗುಂಪಿನ ವಿರುದ್ಧ ಎಫ್‌ಐಆ‌ರ್ ದಾಖಲಿಸುವಂತೆ ಗುಜರಾತ್‌ನ ಪಾಟಣ್ ನ್ಯಾಯಾಲಯವು ಆದೇಶಿಸಿದೆ. 

ಜಿಲ್ಲಾ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಎಚ್. ಪಿ ಜೋಶಿ ಅವರು, 'ಅರ್ಜಿದಾರರಾದ ಮಕ್ಬೂಲ್ ಹುಸೇನ್ ಶೇಖ್ ಎಂಬವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿ ನಿಗದಿತ ಸಮಯದೊಳಗಾಗಿ ತನಿಖೆ ಪೂರ್ಣಗೊಳಿಸಿ' ಎಂದು ಬಲಿಸನಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದ್ದಾರೆ.

'2023ರ ಜುಲೈ 16ರಂದು ನಡೆದ ಕೋಮು ಸಂಘರ್ಷವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಮರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ ಮತ್ತು ಅಂಗಡಿಗಳ ಬಾಡಿಗೆ ಒಪ್ಪಂದವನ್ನು ರದ್ದು ಮಾಡಿಕೊಳ್ಳುವಂತೆ ಜನರಿಗೆ ಕರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೂ ಮೊದಲು ಪೊಲೀಸರ ಬಳಿ ದೂರು ನೀಡಿ ಅಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ ಹೇಳಿದ್ದರು.