-->
ಭಿಕ್ಷೆ ಬೇಡುವ ಮಕ್ಕಳತ್ತ ತಿರುಗಿಯೂ ನೋಡದ ಶಾಹಿದ್ ಪತ್ನಿ ಮೀರಾ: ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ನೆಟ್ಟಿಗರು

ಭಿಕ್ಷೆ ಬೇಡುವ ಮಕ್ಕಳತ್ತ ತಿರುಗಿಯೂ ನೋಡದ ಶಾಹಿದ್ ಪತ್ನಿ ಮೀರಾ: ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ನೆಟ್ಟಿಗರು


ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಸಿನಿಮಾಗಳಲ್ಲಿ ನಟಿಸದಿದ್ದರೂ ಸದಾ ಸುದ್ದಿಯಲ್ಲಿರುತ್ತಾರೆ. ಮೀರಾ ತನ್ನ ಪತಿಯೊಂದಿಗೆ ಎಲ್ಲಾ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭಾಗವಹಿಸುವುದನ್ನು ಕಾಣಬಹುದು. ಮೀರಾ ಫೋಟೋಗಳನ್ನು ಗಮನಿಸಿದಾಗ ಅವರೊಬ್ಬ ಆದರ್ಶಪತ್ನಿ ಎಂದು ಎಲ್ಲರಿಗೂ ಅನ್ನಿಸಲಾರಂಭಿಸುತ್ತದೆ. ಆದರೆ ಇದೀಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಅವರ ಪಾಸಿಟಿವ್ ಇಮೇಜ್ ಗೆ ಧಕ್ಕೆಯಾಗಿದೆ. ಈ ವಿಡಿಯೋ ನೋಡಿದ ಎಲ್ಲರೂ ಮೀರಾ ಮೇಲೆ ಕೋಪಗೊಂಡಿದ್ದಾರೆ.

ಈ ಒಂದು ವೀಡಿಯೋದಿಂದಾಗಿ ಮೀರಾ ರಜಪೂತ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಇಲ್ಲಸಲ್ಲದ ಕಾಮೆಂಟ್‌ಗಳನ್ನು ಎದುರಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಕಾರಿನಿಂದ ಇಳಿಯುವುದನ್ನು ಕಾಣಬಹುದು. ಆಕೆ ಕಾರಿನಿಂದ ಇಳಿಯುತ್ತಿದ್ದಂತೆ, ಇಬ್ಬರು ಬಡ ಮಕ್ಕಳಿಬ್ಬರು ಆಕೆಯನ್ನು ಸುತ್ತುವರೆದು ಹಣ ಕೇಳಲು ಆರಂಭಿಸುತ್ತಾರೆ. ಆಗ ಮೀರಾ ರಜಪೂತ್ ಆ ಮಕ್ಕಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಕಂಡುಬರುತ್ತದೆ.


ಸಹಾಯ ಮಾಡುವುದು ಬಿಡಿ, ಮೀರಾ ಈ ಮಕ್ಕಳತ್ತ ತಿರುಗಿಯೂ ನೋಡುವುದಿಲ್ಲ. ಮೀರಾ ರಜಪೂತ್ ಈ ವರ್ತನೆಯಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ . ಈಕೆ ಬಡ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

ಈ ವಿಡಿಯೋ ನೋಡಿದ ಬಳಕೆದಾರರು ಮೀರಾ ಅವರನ್ನು ಟ್ರೋಲ್ ಮಾಡಿ, 'ಈ ಜನರು ಹೇಗಿದ್ದಾರೆಂದು ಇದು ತೋರಿಸುತ್ತದೆ', 'ಆಕೆಯ ಬಳಿ ನಗದು ಇಲ್ಲದಿರಬಹುದು, ಆದರೆ ಕನಿಷ್ಠ ಆ ಮಕ್ಕಳನ್ನು ನಗುವಂತೆ ಮಾಡಬಹುದಿತ್ತು ಅಥವಾ ಒಮ್ಮೆ ಹಿಂತಿರುಗಿ ನೋಡಬಹುದಿತ್ತು', 'ದಯೆ ಎಲ್ಲಿದೆ? ಆಕೆ ಇಲ್ಲಿ ಲೇಡಿ ಕಬೀರ್ ಸಿಂಗ್', 'ಈ ಹುಡುಗಿ ಈ ಮಗುವಿಗಿಂತ ಬಡವಳು', 'ಶ್ರೀಮಂತರಿಗೆ ಚಿಕ್ಕ ಹೃದಯವಿದೆ'. 'ಎಂಥಹ ಹೆಂಗಸು, ಆ ಬಡ ಮಕ್ಕಳಿಗೆ ಏನಾದರೂ ಕೊಟ್ಟಿದ್ದರೆ ಅವಳಿಗೆ ಏನಾದರೂ ಕೊರತೆಯಾಗುತ್ತಿತ್ತೇ? ಏಕೆ ಹೆಮ್ಮೆಪಡಬೇಕು?' ಎಂದೆಲ್ಲಾ ಕಿಡಿಕಾರಿದ್ದಾರೆ.

Ads on article

Advertise in articles 1

advertising articles 2

Advertise under the article