-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
kadaba:- ನಾಳೆ ಕೋಡಿಂಬಾಳದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಾಹಿತಿ ಕಾರ್ಯಾಗಾರ..

kadaba:- ನಾಳೆ ಕೋಡಿಂಬಾಳದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಾಹಿತಿ ಕಾರ್ಯಾಗಾರ..

ಕಡಬ/ಕೋಡಿಂಬಾಳ:

ಕಡಬದ ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ದೇವಾಲಯ ಕೋಡಿಂಬಾಳ ಇದರ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅಂಗವಾಗಿ ಮಾ.9  ( ಶನಿವಾರ)ರಂದು ಸಮಯ ಪೂರ್ವಾಹ್ನ 8.45 ರಿಂದ  2.00ರ ವರೆಗೆ ವಿಶೇಷ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಲಿದೆ.
ಈ ಶಿಬಿರದಲ್ಲಿ ಸಂಪೂರ್ಣವಾಗಿ ಉಚಿತ ಬಿಪಿ ಮತ್ತು ಮಧುಮೇಹ ಪರೀಕ್ಷೆಗಳು, ಉಚಿತ ಆರೋಗ್ಯ ತಪಾಸಣೆಗಳು, ಕಣ್ಣಿನ ತಪಾಸಣೆಗಳು, ದಂತ ವೈದ್ಯಕೀಯ ತಪಾಸಣೆಗಳು, E.N.T. ಸಂಬಂಧಿಸಿದ ತಪಾಸಣೆಗಳು, ಉಚಿತವಾಗಿ ಲಭ್ಯವಿರುವ ಔಷಧಿಗಳನ್ನು ನೀಡಲಾಗುವುದು.

ಸ್ತ್ರೀಯರಿಗಾಗಿ ವಿಶೇಷ ಹವಾನಿಯಂತ್ರಿತ ಬಸ್ಸಿನಲ್ಲಿ ಪ್ರತ್ಯೇಕವಾಗಿ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಸಾರ್ವಜನಿಕರು ಈ  ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಶಿಬಿರವು ಮಲಂಕರ ಕ್ಯಾಥೋಲಿಕ್ ಅಸೋಸಿಯೇಷನ್ (ಎಂ.ಸಿ.ಎ.) ಪುತ್ತೂರು ಧರ್ಮಪ್ರಾಂತ್ಯ ಹಾಗೂ
ಎಂ.ಸಿ.ಎ. ದಕ್ಷಿಣ ಕನ್ನಡ ವಲಯ ಇದರ ನೇತೃತ್ವದಲ್ಲಿ ಎಂ.ಸಿ.ಎಂ.ಎಫ್ ದಕ್ಷಿಣ ಕನ್ನಡ ವಲಯ
ಇವರ ಸಹಭಾಗಿತ್ವದಲ್ಲಿ
ಆಲ್ ಕಾರ್ಗೋ ಟರ್ಮಿನಲ್ಸ್ ಲಿಮಿಟೆಡ್, ಝಲೇಖ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್‌ ಅಂಕೊಲಾಜಿ
ಇವರ ಆಶ್ರಯದಲ್ಲಿ ನಡೆಯಲಿದ್ದು, ಪುತ್ತೂರು ಧರ್ಮಪ್ರಾಂತ್ಯದ ವಂದನೀಯ ಬಿಷಪ್ ರೆ.ಡಾ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಪುತ್ತೂರು ಧರ್ಮಪ್ರಾಂತ್ಯದ ಎಂಸಿಎ ಆಧ್ಯಾತ್ಮಿಕ ಸಲಹೆಗಾರರಾದ ರೆ.ಡಾ.ಎಲ್ದೋ ಪುತ್ತನ್‌ಕಂಡತ್ತಿಲ್,ಎಂಸಿಎ ಪುತ್ತೂರು ಧರ್ಮಪ್ರಾಂತ್ಯದ ಅಧ್ಯಕ್ಷ ಬೈಜು ಎಸ್.ಆರ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Ads on article

Advertise in articles 1

advertising articles 2

Advertise under the article