UDUPI-ಮೀನುಗಾರಿಕೆ ಬೋಟ್ ಮುಳುಗಡೆ: 8 ಮೀನುಗಾರರ ರಕ್ಷಣೆ - VIRAL VIDEO

ಉಡುಪಿ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮುಳುಗಡೆಗೊಂಡಿದ್ದು ,ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿದ್ದಾರೆ.

ಕಡೆಕಾರು ರಕ್ಷಾ ಅವರಿಗೆ ಬೋಟು ಮಲ್ಪೆ ಬಂದರಿನಿಂದ ತೆರಳಿತ್ತು. ಡಿಸೆಂಬರ್ 19ರಂದು ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್‌ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್ ಕ್ಷಣ ಬೋಟಿನ ತಂಡೇಲ ವಯರ್ ಲೆಸ್ ಮೂಲಕ ಇತರ ಬೋಟ್
ಗಳಿಗೆ ಸಂದೇಶ ನೀಡಿದರು.






 ಶ್ರೀ ಮೂಕಾಂಬಿಕಾ ಅನುಗ್ರಹ ಬೋಟಿನವನರು ಧಾವಿಸಿ ಬಂದು ಮುಳುಗುತ್ತಿರುವ ಬೋಟನ್ನು ಮೇಲೆಳೆಯಲು ಯತ್ನಿಸಿದರು. ನೀರಿನ ಅಬ್ಬರ ಜಾಸ್ತಿಯಾಗಿದ್ದರಿಂದ ಪ್ರಯತ್ನ ಫಲ ನೀಡಲಿಲ್ಲ. ಸುಮಾರು 8 ಗಂಟೆ ವೇಳೆಗೆ ಬೋಟ್ ಪೂರ್ಣ ಮುಳುಗಡೆಗೊಂಡಿತು. ಅದರಲ್ಲಿದ್ದ ಮೀನುಗಾರರನ್ನು ಮೂಕಾಂಬಿಕಾ ಬೋಟಿನವರು ದಡಕ್ಕೆ ಸೇರಿಸಿದ್ದಾರೆ.ಘಟನೆಯಿಂದ ಸುಮಾರು 18 ಲ.ರೂ. ನಷ್ಟ ಅಂದಾಜಿಸಲಾಗಿದೆ.