ಮಂಗಳೂರು: ಹೊಟ್ಟೆ, ಕತ್ತಿಗೆ ಚಾಕುವಿನಿಂದ ಇರಿದುಕೊಂಡು ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ


ಮಂಗಳೂರು: ಹೊಟ್ಟೆ ಹಾಗೂ ಕತ್ತಿಗೆ ಚಾಕುವಿನಿಂದ ಇರಿದುಕೊಂಡು ಕರ್ನಾಟಕ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ಆತ್ಮಹತ್ಯೆ ಶರಣಾಗಿದ್ದಾರೆ

ವಾದಿರಾಜ್(55) ಎಂಬವರು ಆತ್ಮಹತ್ಯೆ ಶರಣಾದ ಬ್ಯಾಂಕ್ ಅಧಿಕಾರಿ.

ವಾದಿರಾಜ್ ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಹೊಟ್ಟೆ ಹಾಗೂ ಕತ್ತಿಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಯವರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ  ಮೃತಪಟ್ಟಿದ್ದಾರೆ.

ವಾದಿರಾಜ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು. ಬೆಳಗ್ಗೆ ಮಕ್ಕಳು ಕಾಲೇಜಿಗೆ ತೆರಳಿದ್ದರು. ಪತ್ನಿ ಕೂಡಾ ಮನೆಯಲ್ಲಿ ಇಲ್ಲದಿದ್ದ ವೇಳೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.


BREAKING NEWS
Loading latest news...
Join our WhatsApp Channel Powered By : Online Pudu