-->
1000938341
ಭಾರತೀಯ ಪತಿಗೆ ವಿಚ್ಛೇದ ನೀಡಿ ಮಕ್ಕಳನ್ನು ಪಾಕ್ ಕರೆದೊಯ್ಯುವೆ - ಅಂಜು

ಭಾರತೀಯ ಪತಿಗೆ ವಿಚ್ಛೇದ ನೀಡಿ ಮಕ್ಕಳನ್ನು ಪಾಕ್ ಕರೆದೊಯ್ಯುವೆ - ಅಂಜುನವದೆಹಲಿ: ತನ್ನ ಫೇಸ್‌ಬುಕ್ ಗೆಖೆಯ ನಸ್ರುಲ್ಲಾನಿಗಾಗಿ ಪಾಕಿಸ್ತಾನಕ್ಕೆ ಸೀಮೋಲ್ಲಂಘನ ಮಾಡಿದ್ದ ಭಾರತೀಯ ಮಹಿಳೆ ಅಂಜು, ಈಗ ಫಾತಿಮಾ ಆಗಿದ್ದಾರೆ‌. ಆದರೆ ಇದೀಗ ಅಂಜು ವಾಘಾ ಬಾರ್ಡರ್ ಮೂಲಕ ದೇಶಕ್ಕೆ ಮರಳಿದ್ದಾರೆ. ಅಮೃತಸರದಲ್ಲಿ ಪಂಜಾಬ್ ಪೋಲೀಸ್ ಗುಪ್ತಚರ ಮತ್ತು ಐಬಿ ಅವಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಬಳಿಕ, ಆಕೆಯನ್ನು ಬುಧವಾರ ತಡರಾತ್ರಿ ನವದೆಹಲಿಗೆ ಬರಲು ಅನುಮತಿ ನೀಡಿದೆ. ಭಾರತಕ್ಕೆ ಅಂಜು ಬರುತ್ತಿದ್ದಂತೆ ತನ್ನ ವರಸೆ ಬದಲಿಸಿದ್ದಾಳೆ.

ವಿಚಾರಣೆಯ ಸಂದರ್ಭ, ಅಂಜು ಭಾರತದಲ್ಲಿ ತನ್ನ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಳು ಮತ್ತು ತಾನು ಪಾಕಿಸ್ತಾನಕ್ಕೆ ಹಿಂತಿರುಗುತ್ತೇನೆ. ನನ್ನ ಭಾರತೀಯ ಪತಿ ಅರವಿಂದ್​​ಗೆ ವಿಚ್ಛೇದನ ನೀಡುತ್ತೇನೆ. ಬಳಿಕ ತನ್ನ ಮಕ್ಕಳನ್ನು  ಪಾಕಿಸ್ತಾನಕ್ಕೆ ಕರೆದೊಯ್ಯುತ್ತೇನೆ. ಪಾಕಿಸ್ತಾನಕ್ಕೆ ತೆರಳಿ ಫೇಸ್‍ಬುಕ್ ಗೆಳೆಯನೊಂದಿಗೆ ಜೀವನ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾಳೆ.

ಅಂಜು ವಿಚ್ಛೇದಿತ ಪತಿಯನ್ನು ಅವರು ಪಾಕಿಸ್ತಾನದಿಂದ ಹಿಂದಿರುಗಿದ ಬಗ್ಗೆ ಕೇಳಿದಾಗ. ಈ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಅವರು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ಅಂಜು ಮಾತನಾಡಿ, ತಾನು ಈ ವರ್ಷ ಜುಲೈ 27 ರಂದು ಪಾಕಿಸ್ತಾನಕ್ಕೆ ಹೋಗಿದ್ದೇನೆ. ತಾನು ಇಸ್ಲಾಂಗೆ ಮತಾಂತರಗೊಂಡು ನುಸ್ರುಲ್ಲಾನನ್ನು ಮದುವೆಯಾಗಿದ್ದೇನೆ. ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ದಿರ್ ಜಿಲ್ಲೆಯ ಮೊಹಲ್ಲಾ ಕಲ್ಸು ಪೋಸ್ಟ್‌ನಲ್ಲಿ ವಾಸಿಸುತ್ತಿರುವ ಗುಯಿಮುಲಾ ಖಾನ್ ಅವರ ಮಗ ತನ್ನ ಗೆಳೆಯ ನಸ್ರುಲ್ಲಾ. ಅವರು ಔಷಧಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದ್ದಾಳೆ.

ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‍ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.  ಮಹಿಳೆ ಮತಾಂತರ ಗೊಂಡು ಅಲ್ಲಿ ಮುಸ್ಲಿಂ ಯುವಕನ್ನು ಮದುವೆಯಾಗಿದ್ದಾರೆ. ಆಕೆಯ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಆಕೆಯ ಬಳಿ ಇರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article