ಮಂಗಳೂರು: ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಪ್ರಭು ಸಾಧನೆ

ಮಂಗಳೂರು: ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಪ್ರಭು ಸಾಧನೆ





ಮಂಗಳೂರಿನ ಪಾದುವ ಹೈಸ್ಕೂಲ್ ವಿದ್ಯಾರ್ಥಿನಿ ಆದಿತಿ ಎಸ್. ಪ್ರಭು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.



ಮಂಗಳೂರಿನ ವಕೀಲರಾದ ಶ್ರೀಪತಿ ಪ್ರಭು ಮತ್ತು ಗೌರಿ ಎಸ್. ಪ್ರಭು ಅವರ ಪುತ್ರಿಯಾಗಿರುವ ಆದಿತಿ ಅವರ ಸಾಧನೆಗೆ ಅವರ ಕುಟುಂಬ ವರ್ಗ ಅಪಾರ ಮೆಚ್ಚುಗೆ ಮತ್ತು ಹರ್ಷ ವ್ಯಕ್ತಪಡಿಸಿದೆ.



ಯಾವುದೇ ಟ್ಯೂಷನ್ ಪಡೆಯದೆ ಮನೆಯಲ್ಲೇ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಆದಿತಿ ಈ ಸಾಧನೆ ಮಾಡಿದ್ದಾರೆ. ಇದಕ್ಕೆ ಹೈಸ್ಕೂಲ್ ಅಧ್ಯಾಪಕ ವೃಂದದ ಅಪಾರ ಬೆಂಬಲ ಮತ್ತು ವಿಶೇಷ ಗಮನವೂ ಕಾರಣ ಎಂದು ಆದಿತಿ ಪ್ರಭು ಅವರ ತಂದೆ ಶ್ರೀಪತಿ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.



ಆದಿತಿ ಅವರ ಸಾಧನೆ ಇಡೀ ಕುಟುಂಬಕ್ಕೆ ಹರ್ಷ ತಂದಿದ್ದು, ಈ ಸಾಧನೆಯನ್ನು ಕುಟುಂಬ ವರ್ಗ ಸೇರಿ ಸಂಭ್ರಮಿಸಿದ್ದಾರೆ.


Adithi S. Prabhu