ಸಿನಿಮಾ ಥಿಯೇಟರ್ ನಲ್ಲಿ ನನ್ನ ಮುಂಭಾಗವೇ ಯುವಕ... ಕಹಿ ಘಟನೆಯನ್ನು ಬಿಚ್ಚಿಟ್ಟ ಮಹಿಳಾ ಯೂಟ್ಯೂಬರ್


ಕೊಚ್ಚಿ: ಮಹಿಳಾ ಯೂಟ್ಯೂಬರ್ ಅಸ್ಲಾ ಮಾರ್ಲಿ ಆಧುನಿಕ ಸಮಾಜದಲ್ಲೂ ಇನ್ನೂ ಕಳಂಕವಾಗಿ ಉಳಿದುಕೊಂಡಿರುವ ಕಾಮಾಸಕ್ತಿಯ ಅನುಭವಗಳು ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ತಾವು ಆಡುವ ಮಾತುಗಳಿಂದಲೇ ಖ್ಯಾತಿ ಪಡೆದಿದ್ದಾರೆ.

ಇತ್ತೀಚೆಗೆ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ಲೈಂಗಿಕತೆ ಕುರಿತು ತಮ್ಮ ಅನುಭಗಳನ್ನು ಹಂಚಿಕೊಂಡಿದ್ದಾರೆ. ಓರ್ವ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ನೋಡಿದ್ದೇನೆ. ಅದೊಂದು ಸಣ್ಣ ರಸ್ತೆ. ಆದರೆ ಆತ ಜನರು ಓಡಾಡುವ ರಸ್ತೆಯಲ್ಲೇ ಹಸ್ತಮೈಥುನದಲ್ಲಿ ತೊಡಗಿದ್ದ. ಇಂತಹ ಅನುಭವವನ್ನು ನಾನು ಚಿತ್ರಮಂದಿರದೊಳಗೂ ಅನುಭವಿಸಿದ್ದೇನೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಓರ್ವ ಯುವಕ, ತನ್ನ ಪ್ಯಾಂಟ್ ಜಿಪ್ ಜಾರಿಸಿ, ನನ್ನ ಮುಂಭಾಗದಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದನು. ಈ ವೇಳೆ ನಾನು ಸಿನಿಮಂದಿರದಿಂದಲೇ ಎದ್ದು ಹೊರಬಂದಿದ್ದೆ ಎಂದು ಅಸ್ಲಾ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಬಹುತೇಕರಿಗೆ ಮಹಿಳಾ ಕಾಂಡೋಮ್‌ಗಳು ಮಾರುಕಟ್ಟೆಯಲ್ಲಿ ಇವೆ ಎಂಬುದೇ ಗೊತ್ತಿಲ್ಲ. ಪುರುಷರ ಕಾಂಡೋಮ್‌ಗಳು ಎಲ್ಲ ಕಡೆಗಳಲ್ಲೂ ದೊರಕುತ್ತದೆ. ಅಲ್ಲದೆ ಮಾರುಕಟ್ಟೆಗಳಲ್ಲಿ ಇದು ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುತ್ತವೆ. ಮಹಿಳೆಯರ ಕಾಂಡೋಮ್‌ಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಪುರುಷರ ಕಾಂಡೋಮ್‌ಗಿಂತ ಮೂರು ಪಟ್ಟು ಹೆಚ್ಚಿನ ಬೆಲೆ ಇದೆ ಎಂದು ತಿಳಿಸಿದರು.

ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಸಹ ಪೋರ್ನ್ ವೀಡಿಯೋಗಳನ್ನು ವೀಕ್ಷಿಸುತ್ತಾರೆ. ಈ ಸಮಕಾಲೀನ ಕಾಲದಲ್ಲಿ ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲ. ಎಲ್ಲರೂ ಒಮ್ಮೆ ಪ್ರಯತ್ನಿಸಿಯೇ ಇರುತ್ತಾರೆ. ಆದರೆ ತಾವು ನೋಡಿರುವ ದೃಶ್ಯಗಳನ್ನು ವಾಸ್ತವವಾಗಿಸಲು ಪ್ರಯತ್ನಿಸುವಾಗ ಮಾತ್ರ ಸಮಸ್ಯೆ ಬರುತ್ತದೆ. ಇದರಿಂದ ಹಲವು ಸಂಬಂಧಗಳು ಹಳಸಿ ಹೋಗಿವೆ. ಯಾವುದೇ ಉದ್ಯಮಕ್ಕಿಂತ ಹೆಚ್ಚಾಗಿ ಅಶ್ಲೀಲ ಮತ್ತು ಲೈಂಗಿಕ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂದು ಅಸ್ಲಾ ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu