ಮಂಗಳೂರು: ಪಬ್ಬಾಸ್ ನಲ್ಲಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ
Friday, April 28, 2023
ಮಂಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಗರದ ಪ್ರಖ್ಯಾತ ಐಸ್ ಕ್ರೀಂ ಪಾರ್ಲರ್ ನಲ್ಲಿ ಐಸ್ ಕ್ರೀಮ್ ಸವಿದರು.
ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ಅವರು ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಆ ಬಳಿಕ ರಾತ್ರಿ ಬಿಗಿ ಭದ್ರತೆಯೊಂದಿಗೆ ಮಂಗಳೂರಿಗೆ ಆಗಮಿಸಿದ ಅವರು ನಗರದ ಲಾಲ್ ಬಾಗ್ ನಲ್ಲಿರುವ ಪ್ರಖ್ಯಾತ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಐಸ್ ಕ್ರೀಂ ಸವಿದರು.
ಈ ವೇಳೆ ರಾಹುಲ್ ಗಾಂಧಿಯೊಂದಿಗೆ ಸೆಲ್ಫಿಗೆ ಮುಗಿಬಿದ್ದರು. ರಾಹುಲ್ ಗಾಂಧಿಯವರು ಸೆಲ್ಫಿಗೆ ಪೋಸ್ ಕೊಟ್ಟರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಡಿ ಕೆ ಶಿವಕುಮಾರ್ , ಕೆ ಸಿ ವೇಣುಗೋಪಾಲ್, ಮೊಹಮ್ಮದ್ ನಲ್ಪಾಡ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.