ಮಂಗಳೂರು: ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮಹಿಳೆಯ ಪ್ರಾಣಕ್ಕೆ ಮುಳುವಾಯ್ತು ಹಂಪ್ಸ್


ಮಂಗಳೂರು: ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಹಂಪ್ಸ್ ಕಾರಣದಿಂದ ಪ್ರಾಣ ಕಳೆದುಕೊಂಡಿರುವ ಘಟನೆ ಕಟೀಲು ಸಮೀಪದ ಕಲ್ಲಕುಮೇರು ಬಳಿ ನಡೆದಿದೆ.

ಕಾರ್ಕಳದ ಈದು ಗ್ರಾಮ ನಿವಾಸಿ ಮಮತಾ ಶೆಟ್ಟಿ (35) ಮೃತಪಟ್ಟ ಮಹಿಳೆ.

ಮಮತಾ ಶೆಟ್ಟಿಯವರು ಕಾರ್ಕಳದಿಂದ ಕಟೀಲಿಗೆ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು. ಅವರು ಕಟೀಲು ಬಳಿಯ ಕಲ್ಲಕುಮೇರು ಬಳಿ ಬರುತ್ತಿದ್ದಾಗ ರಸ್ತೆಯಲ್ಲಿರುವ ಹಂಪ್ಸ್ ಅನ್ನು ಗಮನಿಸದೆ ಅವರ ಪತಿ ಒಂದೇ ವೇಗದಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮಮತಾ ಶೆಟ್ಟಿ ದ್ವಿಚಕ್ರವಾಹನದಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಅವೈಜ್ಞಾನಿಕ ಹಂಪ್ಸ್ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu