ಮಂಗಳೂರು: ಲಾಡ್ಜ್ ನಲ್ಲಿ ಕೇರಳ ಮೂಲದ ದಂಪತಿ ಆತ್ಮಹತ್ಯೆ


ಮಂಗಳೂರು: ನಗರದ ಫಳ್ನೀರ್ ರಸ್ತೆಯಲ್ಲಿರುವ ಬ್ಲೂಸ್ಟಾರ್ ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೇರಳ ಕಣ್ಣೂರು ಮೂಲದ ರವೀಂದ್ರನ್ (55) ಹಾಗೂ ಸುಧಾ (50)ಆತ್ಮಹತ್ಯೆ ಮಾಡಿಕೊಂಡವರು.

ಫೆ.6ರಂದು ದಂಪತಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಅಂದು ರಾತ್ರಿ ಲಾಡ್ಜ್ ಸಿಬ್ಬಂದಿ ದಂಪತಿಯನ್ನು ನೋಡಿದ್ದಾರೆ. ಆದರೆ ಆ ಬಳಿಕ ದಂಪತಿಯನ್ನು ಯಾರೂ ನೋಡಿರಲಿಲ್ಲ. ಇಂದೂ ಕೂಡಾ ಲಾಡ್ಜ್ ಕೊಠಡಿಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಲಾಡ್ಜ್ ಕೊಠಡಿಯ ಬಾಗಿಲನ್ನು ಪಂಚರ ಸಮಕ್ಷಮ ಒಡೆದು ನೋಡಿದಾಗ ದಂಪತಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿ ಜ.6ರಂದು ದಂಪತಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
BREAKING NEWS
Loading latest news...
Join our WhatsApp Channel Powered By : Online Pudu