ಕಾಸರಗೋಡು: ರಾತ್ರಿ ಮನೆಯಲ್ಲಿ ಮಲಗಿದ್ದ ಕಾಲೇಜು ವಿದ್ಯಾರ್ಥಿನಿ ಬೆಳಗ್ಗೆ ರೈಲ್ವೆ ಹಳಿಯಲ್ಲಿ ಮೃತದೇಹವಾಗಿ ಪತ್ತೆ

ಕಾಸರಗೋಡು: ರಾತ್ರಿ ಮನೆಯಲ್ಲಿ ಮಲಗಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಬೆಳಗ್ಗೆ ರೈಲ್ವೆ ಹಳಿಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಂಎಸ್ಸಿ ಬಯೋ ಕೆಮಿಸ್ಟ್ರಿ ವಿದ್ಯಾರ್ಥಿನಿ ಅಂಜನಾ ಎಸ್.(21) ಮೃತಪಟ್ಟ ದುರ್ದೈವಿ.

ಸೋಮವಾರ ರಾತ್ರಿ ವೇಳೆ ಊಟ ಮಾಡಿ ಮಲಗಿದ್ದ ಅಂಜನಾ ಎಸ್. ಬೆಳಗ್ಗೆ ನಾಪತ್ತೆಯಾಗಿದ್ದರು. ಮನೆಮಂದಿ ಅವರನ್ನು ಹುಡುಕಾಡಿದಾಗ ಅವರು ಮನೆಯಿಂದ ಅನತಿ ದೂರದ ರೈಲ್ವೆ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಸರಗೋಡು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu