-->
1000938341
ಧರ್ಮಸ್ಥಳ: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿಯ ಅತ್ಯಾಚಾರ: 17ರ ಬಾಲಕನ ಮೇಲೆ ದೂರುPocso

ಧರ್ಮಸ್ಥಳ: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಅಪ್ರಾಪ್ತ ಬಾಲಕಿಯ ಅತ್ಯಾಚಾರ: 17ರ ಬಾಲಕನ ಮೇಲೆ ದೂರುPocso

ಮಂಗಳೂರು: ಇನ್ ಸ್ಟಾಗ್ರಾಂ ಮೂಲಕ ಪರಿಚಿತಳಾದ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಲ್ಲಿಯೇ‌ ಅತ್ಯಾಚಾರಗೈದಿರುವ 17 ವರ್ಷದ ಬಾಲಕನ‌ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಖಾಸಗಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 16ರ ಸಂತ್ರಸ್ತ ಬಾಲಕಿಗೆ ಸುಮಾರು ಒಂದು ವರ್ಷಗಳ ಹಿಂದೆ ಇನ್‌ ಸ್ಟಾಗ್ರಾಂನಲ್ಲಿ  17 ವರ್ಷದ ಬಾಲಕನ  ಪರಿಚಯವಾಗಿದೆ. ಆತ ಆ ಬಳಿಕ ಬಾಲಕಿಗೆ  ಮೇಸೇಜ್ ಮಾಡಲು ಆರಂಭಿಸಿದ್ದಾನೆ. ಈ ವೇಳೆ‌ ಆತ ಬಾಲಕಿಯ ಮನೆಗೆ ಬರುವುದಾಗಿ ತಿಳಿಸುತ್ತಿದ್ದ

ಅದರಂತೆ ಆತ 2022ರ ಆಗಸ್ಟ್ 13ರಂದ ತಾನು ಬಾಲಕಿಯ ಮನೆಗೆ  ಬರುತ್ತೇನೆ ನೀನು ಬಾಗಿಲು ತೆಗೆಯಬೇಕು. ಇಲ್ಲದಿದ್ದಲ್ಲಿ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆಂದು ಬೆದರಿಸಿದ್ದಾನೆ. ಅಂದು ರಾತ್ರಿ ಎಲ್ಲರೂ ಮಲಗಿರುವ ವೇಳೆ ರಾತ್ರಿ 12 ಗಂಟೆಗೆ ಬಾಲಕಿಯ ಮನೆಗೆ ಬಾಲಕ ಬಂದಿದ್ದಾನೆ. ಬಾಲಕಿ  ಮನೆಯಲ್ಲಿ ಎಲ್ಲರೂ ಮಲಗಿರುವುದನ್ನು ಖಚಿತ ಪಡಿಸಿಕೊಂಡು ಮನೆಯ ಬಾಗಿಲು ತೆರೆದಿದ್ದಾಳೆ. ಇಬ್ಬರೂ ಆಕೆಯ ಕೊಠಡಿಗೆ ಹೋಗಿದ್ದಾರೆ. ಅಲ್ಲಿ ಆತ ಬಾಲಕಿಯ  ಮೇಲೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.

ಈ ವಿಚಾರವನ್ನು ಯಾರಲ್ಲಿಯೂ ಹೇಳಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾನೆ. ಆ ಬಳಿಕವೂ ಇದೇ ರೀತಿ ಈತ  4-5 ಸಲ ಬಂದು ಲೈಂಗಿಕ ಸಂಪರ್ಕ ನಡೆಸಿದ್ದನು. ಸೆಪ್ಟೆಂಬರ್ 2ರಂದು ಈತ ರಾತ್ರಿ ಮನೆಗೆ ಬರುತ್ತೇನೆಂದು ಬಾಲಕಿಗೆ ತಿಳಿಸಿದ್ದಾನೆ. ಆದರೆ ಆಕೆ ಬೇಡವೆಂದೂ ಹೇಳಿದ್ದರೂ, ರಾತ್ರಿ ಬಂದಿದ್ದಾನೆ. ಆತ ಅಂದು ಅಂದು ಸುಮಾರು 11.50 ಗಂಟೆಗೆ ಮನೆಗೆ ಬಂದು ಲೈಂಗಿಕ ಸಂಪರ್ಕ ಎಸಗಿದ್ದಾನೆಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ದೂರಿನನ್ವಯ  ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article