ಹಾಡಹಗಲೇ ಪಾರ್ಕ್ ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಪೊಲೀಸ್ ಅಧಿಕಾರಿ ಅಮಾನತು!

ಲಂಡನ್​: ಹಾಡಹಗಲೇ ಪಾರ್ಕೊಂದರಲ್ಲಿ ಲೈಂಗಿಕ ದುರ್ವತನೆ  ತೋರಿರುವ ಪೊಲೀಸ್​ ಅಧಿಕಾರಿಯ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ಲಂಡನ್​ನಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿಯು ದುರ್ವರ್ತನೆ ತೋರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ಬಳಿಕ ಆತನ ಮೇಲೆ ಪ್ರಕರಣ ದಾಖಲಾಗಿದೆ. ಕೆವಿನ್​ ಫಿಲಿಪ್ಸ್ ಈ ಆರೋಪಿಯು ಪೊಲೀಸ್ ಸಮುದಾಯ ಬೆಂಬಲ ಅಧಿಕಾರಿ (ಪಿಸಿಎಸ್​ಒ)ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೆಟ್‌ ರೋಡ್ಸ್​ ಮತ್ತು ಸಾರಿಗೆ ಪೊಲಿಸಿಂಗ್ ಕಮಾಂಡ್‌ ವಿಭಾಗದಲ್ಲಿ ಆತ ಕೆಲಸ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಆತನ ವಿರುದ್ಧ ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಿರುವ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಲಂಡನ್​ ಮೆಟ್ರೋಪಾಲಿಟನ್​ ಪೊಲೀಸರು ಹೇಳಿದ್ದಾರೆ. 

ಆರೋಪಿ ಕೆವಿನ್​ನನ್ನು ಶುಕ್ರವಾರ ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂಭಾಗ ಹಾಜರುಪಡಿಸಲಾಯಿತು. ವರದಿಗಳ ಪ್ರಕಾರ, ಕೆವಿನ್​ ಹಾಡಹಗಲೇ ಲಂಡನ್ ಪಾರ್ಕೊಂದರ ಬೆಂಚ್‌ ಮೇಲೆ ಕುಳಿತು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಈ ವೀಡಿಯೋವನ್ನು ಯಾರು? ಚಿತ್ರೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬುಧವಾರ ರಾತ್ರಿ 11.30ರ ಸುಮಾರಿಗೆ ಈ ದೃಶ್ಯಾವಳಿಗಳನ್ನು ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಮೆಟ್‌ನ ವಕ್ತಾರರು ತಿಳಿಸಿದ್ದಾರೆ. ಮೆಟ್ಸ್ ಡೈರೆಕ್ಟರೇಟ್ ಆಫ್ ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಪ್ರಕರಣದ ತನಿಖೆಯನ್ನು ಮುನ್ನಡೆಸುತ್ತಿದ್ದು, ಸದ್ಯ ಆರೋಪಿ ಪಿಸಿಎಸ್ಒ ಅನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu