ಮನೆಯ ಡ್ರೈವರ್ 2 ಮಕ್ಕಳ ತಂದೆಯನ್ನು ವಿವಾಹವಾದ ಬಿಕಾಂ ವಿದ್ಯಾರ್ಥಿನಿ!

ವಿಜಯಪುರ: ಮನೆಯ ಕಾರು ಡ್ರೈವರ್, ಎರಡು ಮಕ್ಕಳ ತಂದೆಯನ್ನೇ ವಿದ್ಯಾರ್ಥಿನಿಯೋರ್ವಳು ಪ್ರೀತಿಸಿ ವಿವಾಹವಾಗಿರುವ ವಿಚಿತ್ರ ಘಟನೆಯೊಂದು ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 

ಮನೆಯ ಕಾರ್​​ ಡ್ರೈವರ್​​ ಆಗಿರುವ ಸೋಮಲಿಂಗ ಎಂಬಾತನೊಂದಿಗೆ ಮನೆಯವರು ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಅಕ್ಷತಾಳನ್ನು ಪ್ರತಿದಿನ ಮನೆಯಿಂದ ಕಾಲೇಜಿ​ಗೆ ಬಿಡಲು ಹೇಳುತ್ತಿದ್ದರು. ದಿನಾ ಕಾಲೇಜಿಗೆ ಡ್ರಾಪ್ ಕೊಡುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೀತಿ ಉಂಟಾಗಿದೆ. ಈಗಾಗಲೇ ಸೋಮಲಿಂಗನಿಗೆ ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಆದರೂ ವಿದ್ಯಾರ್ಥಿನಿ ಅಕ್ಷತಾ ಆತನೊಂದಿಗೆ ತಾಳಿ ಕಟ್ಟಿಸಿಕೊಂಡಿದ್ದಾಳೆ. ಸದ್ಯ ಇಬ್ಬರೂ ರಿಜಿಸ್ಟ್ರಾರ್​ ಮದುವೆಯಾಗಿದ್ದು, ಪೋಷಕರಿಂದ ಬೆದರಿಕೆ ಇರುವ ಕಾರಣ ರಕ್ಷಣೆ ಕೋರಿ ಎಸ್ಪಿ ಮೊರೆ ಹೋಗಿದ್ದಾರೆ. 

ವಿಚಿತ್ರವೆಂದರೆ ಸೋಮಲಿಂಗನಿಗೆ ಮದುವೆಯಾಗಿ ಇಬ್ಬರು ಮಕ್ಕಳ ತಂದೆ ಎಂಬ ವಿಚಾರ ತಿಳಿದಿದ್ದರೂ   ಅಕ್ಷತಾ ಆತನನ್ನು ಮದುವೆಯಾಗಿದ್ದಾಳೆ. ಸೋಮಲಿಂಗ ತನಗೆ ಮದುವೆಯಾದ ವಿಚಾರ ತಿಳಿಸಿದ್ದರೂ ಅಕ್ಷತಾ ಮಾತ್ರ ಆತನನ್ನೇ ಮದುವೆಯಾಗುವೆನೆಂದು ಹಠ ಹಿಡಿದಿದ್ದಳಂತೆ. ಹೀಗಾಗಿ ನವೆಂಬರ್ 9ರಂದು ರಿಜಿಸ್ಟ್ರಾರ್ ವಿವಾಹವಾಗಿದ್ದರಂತೆ. 


ಪ್ರೀತಿ ಎಂಬುದು ಹೇಗೆ ಯಾರ ಮೇಲೆ ಹುಟ್ಟುತ್ತದೆ ಎಂದು ತಿಳಿಯೋಲ್ಲ. ಸೋಮಲಿಂಗನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಎರಡು ಮದುವೆಯಾದರೆ ತಪ್ಪೇನು, ಸೋಮಲಿಂಗನ ಮೊದಲ ಪತ್ನಿಯೊಂದಿಗೆ ನಾನು ಹೊಂದಾಣಿಕೆಯಿಂದ ಇದ್ದು ಸಂಸಾರ ನಡೆಸುತ್ತೇನೆ ಎನ್ನುತ್ತಾಳೆ ಅಕ್ಷತಾ. ಸೋಮಲಿಂಗನೂ, ತನಗೆ ಇಬ್ಬರು ಪತ್ನಿಯರಿದ್ದರೆ ತೊಂದರೆಯಿಲ್ಲ. ನನ್ನ ಮೊದಲ ಪತ್ನಿಯ ಮನವೊಲಿಸುತ್ತೇನೆ. ನಾನು ಬಿಟ್ಟರೂ ಅವಳು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನುತ್ತಿದ್ದಾನೆ. 

ಸದ್ಯ ಈ ಮದುವೆಗೆ ಎರಡೂ ಕಡೆಯ ಕುಟುಂಬದವರ ವಿರೋಧ ವ್ಯಕ್ತವಾಗಿದೆ. ಅಕ್ಷತಾ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ, ತನಗೆ ಸೋಮಲಿಂಗನೇ ಬೇಕು ಎಂಸು ಪೋಷಕರಿಗೆ ಹೇಳಿದ್ದಳಂತೆ. ಇದೀಗ ಪೋಷಕರು ನಾಪತ್ತೆ ದೂರು ದಾಖಲಿಸಿದ್ದ ಕಾರಣ ಜೀವ ಬೆದರಿಕೆಯಿದೆ ಇದೆ. ರಕ್ಷಣೆ ಕೊಡಿ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದಿದ್ದ ಜೋಡಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu