-->
ಕೇರಳದ ಇಬ್ಬರು ಮಾಡೆಲ್ ಗಳ ಸಾವಿಗಿಂತ ಮೊದಲು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ: 'ನಂಬರ್ 18' ಹೊಟೇಲ್ ಮಾಲಕನಿಗೆ ಮತ್ತೆ ಕಂಟಕ

ಕೇರಳದ ಇಬ್ಬರು ಮಾಡೆಲ್ ಗಳ ಸಾವಿಗಿಂತ ಮೊದಲು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ: 'ನಂಬರ್ 18' ಹೊಟೇಲ್ ಮಾಲಕನಿಗೆ ಮತ್ತೆ ಕಂಟಕ

ಕೊಚ್ಚಿ: ಕೇರಳ ಮಾಡೆಲ್​ಗಳಿಬ್ಬರ ದುರಂತ ಸಾವು ಪ್ರಕರಣದ ಆರೋಪಿ ‘ನಂಬರ್​ 18’ ಹೋಟೆಲ್ ಮಾಲಕ ರಾಯ್​ ಜೆ ವಯಲತ್​ ವಿರುದ್ಧ ಇದೀಗ ಫೋರ್ಟ್​ ಕೊಚ್ಚಿ ಪೊಲೀಸ್​ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಮತ್ತೊಂದು ಪ್ರಕರಣ ದಾಖಲಾಗಿದೆ. 

ತನ್ನ ಅಪ್ರಾಪ್ತೆ ಪುತ್ರಿಯ ಮೇಲೆ ಮೇಲೆ ಆರೋಪಿ ರಾಯ್​ ಜೆ ವಯಲತ್​​ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ಕೋಯಿಕ್ಕೊಡು ಮೂಲದ ಮಹಿಳೆ ದೂರು ದಾಖಲಿಸಿದ್ದಾರೆ. ರಾಯ್​ ಸ್ನೇಹಿತ ಸೈಜು ಥಾಂಕಚನ್​ ಹಾಗೂ ಸೈಜು ಸ್ನೇಹಿತೆ ಅಂಜಲಿ ಹೆಸರು ಕೂಡಾ ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

ದೂರಿನ ಪ್ರಕಾರ ಮಾಡೆಲ್​ಗಳಿದ್ದ ಕಾರು ಅಪಘಾತವಾಗುವ ಒಂದು ವಾರಕ್ಕೂ ಮೊದಲು 'ನಂಬರ್​ 18' ಹೋಟೆಲ್​ನಲ್ಲಿ ಮಾಲಕ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಅಲ್ಲದೆ, ಆತ ಅಪ್ರಾಪ್ತೆಯ ಮೇಲೆ ಎಸಗಿರುವ ಲೈಂಗಿಕ ದೌರ್ಜನ್ಯದ ದೃಶ್ಯವನ್ನು ತನ್ನ ಮೊಬೈಲ್​ನಲ್ಲಿ ​ ಸೆರೆಹಿಡಿದ್ದಾನೆ. ಈ ಬಗ್ಗೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದರೆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಆರೋಪಿ ಅಂಜಲಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಸದ್ಯ ಪೊಕ್ಸೊ ಪ್ರಕರಣವನ್ನು ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರ ಮಾಡಲಾಗಿದೆ. 

ದೂರು ದಾಖಲಿಸಿರುವ ಮಹಿಳೆ ಹಾಗೂ ಆಕೆಯ ಸಂತ್ರಸ್ತೆ ಪುತ್ರಿಯ ಹೇಳಿಕೆ ಪಡೆದುಕೊಂಡ ಬಳಿಕ ಪೊಲೀಸರು ಆರೋಪಿ ರಾಯ್​ ಜೆ ವಯಲತ್​​ನನ್ನು ಬಂಧಿಸುವ ಸಾಧ್ಯತೆ ಇದೆ. ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣದಲ್ಲೂ ರಾಯ್​ ಹಾಗೂ ಸೈಜು ಆರೋಪಿಗಳಾಗಿದ್ದಾರೆ. ಅಲ್ಲದೆ, ಡ್ರಗ್ಸ್​ ಬಳಕೆ ಮತ್ತು ಡ್ರಗ್ಸ್​ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಆರೋಪಿ ಸೈಜು ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಸುಮಾರು 7 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಸದ್ಯ ಮಾಡೆಲ್​ಗಳಿಬ್ಬರ ಸಾವಿನ ಪ್ರಕರಣದಲ್ಲಿಇಬ್ಬರೂ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

Ads on article

Advertise in articles 1

advertising articles 2

Advertise under the article