-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮನೆಗೆ ನುಗ್ಗಿದ್ದ ಕಳ್ಳ ಮಾಡಿದ್ದೇನು ಗೊತ್ತೇ?: ಅಷ್ಟಲ್ಲದೆ ಆತ ತಾನೇ 15 ಸಾವಿರ ರೂ. ಇಟ್ಟದ್ದೇಕೆ ಗೊತ್ತೇ?

ಮನೆಗೆ ನುಗ್ಗಿದ್ದ ಕಳ್ಳ ಮಾಡಿದ್ದೇನು ಗೊತ್ತೇ?: ಅಷ್ಟಲ್ಲದೆ ಆತ ತಾನೇ 15 ಸಾವಿರ ರೂ. ಇಟ್ಟದ್ದೇಕೆ ಗೊತ್ತೇ?

ಮೆಕ್ಸಿಕೊ: ಕಳ್ಳರು ದೋಚಲು ಬಂದರೆ, ಎಲ್ಲವನ್ನೂ ದೋಚಿ ಹೋಗುತ್ತಾರೆ. ಆದರೆ ಇಲ್ಲೊಂದು ಮನೆಗೆ ಕನ್ನ ಹಾಕಿರುವ ಕಳ್ಳ ತಾನು ಕದ್ದ ಹಣವನ್ನೇ ಮನೆಯೊಳಗಿಟ್ಟು ಹೋಗಿದ್ದಾನೆ. ಇಂಥದ್ದೊಂದು ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇದೀಗ ಈ ವಿಚಾರ ವಿಶ್ವಾದ್ಯಂತ ಭಾರಿ ವೈರಲ್‌ ಆಗಿದೆ.

ಶಸ್ತ್ರಸಜ್ಜಿತ ಕಳ್ಳನೊಬ್ಬನು ಯಾರೂ ಇಲ್ಲದ ಸಂದರ್ಭ ನೋಡಿ ಮನೆಯೊಂದರ ಕಿಟಕಿಯನ್ನು ಮುರಿದು ಒಳ ನುಗ್ಗಿದ್ದಾನೆ. ನಂತರ ಆ ಮನೆಯಲ್ಲಿಯೇ ಸ್ನಾನ ಮಾಡಿದ್ದಾನೆ. ತಿಂಡಿ-ತಿನಿಸು ತಿಂದಿದ್ದಾನೆ. ಮನೆಯಲ್ಲಿದ್ದ ಬಿಯರ್ ಕುಡಿದು ಮಲಗಿದ್ದಾನೆ. ಬೆಳಗ್ಗೆದ್ದು ಹೋಗಿದ್ದಾನೆ. 

ಮನೆಯವರು ಬಂದು ನೋಡಿದಾಗ ಅವರು ಶಾಕ್‌ಗೆ ಒಳಗಾಗಿದ್ದಾರೆ. ಮನೆಯಲ್ಲಿ ಕಳ್ಳತನ ಆಗಿರುವುದು ತಿಳಿದಿದೆ. ಲಗುಬಗೆಯಿಂದ ಮನೆಯಲ್ಲಿ ಇಟ್ಟಿದ್ದ ನಗದು, ಆಭರಣಗಳನ್ನು ಪರೀಕ್ಷಿಸಿದ್ದಾರೆ. ಆದರೆ ಮನೆಯಲ್ಲಿದ್ದ ತಿನಿಸುಗಳು ಮಾತ್ರ ಖಾಲಿಯಾಗಿತ್ತೇ ಹೊರತು ಹಣ- ಒಡವೆ ಮಾತ್ರ ಸರಿಯಾಗಿಯೇ ಇತ್ತು. ಸಾಲದು ಎಂಬುದಕ್ಕೆ ಅಲ್ಲಿ ಟೇಬಲ್‌ ಮೇಲೆ 200 ಡಾಲರ್‌ (ಸುಮಾರು 15 ಸಾವಿರ ರೂ.) ಇತ್ತು. ಕೂಡಲೇ ಅವರು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. 

ಈ ವಿಚಿತ್ರ ನೋಡಿ ಪೊಲೀಸರಿಗೂ ಅಚ್ಚರಿಯಾಗಿದೆ. ಬಳಿಕ ಸಿಸಿಟಿವಿ ದೃಶ್ಯಗಳು ಸೇರಿದಂತೆ ಕೆಲವೊಂದು ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಆತನಿಗೆ ಕೇಳಿದಾಗ, ನಾನು ಕಳವು ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿರಲಿಲ್ಲ. ಬದಲಿಗೆ ಮಲಗಿಕೊಳ್ಳಲು ಬೆಚ್ಚಗಿನ ಸ್ಥಳದ ಅವಶ್ಯಕತೆ ಇತ್ತು, ಹಾಗಾಗಿ ಅಲ್ಲಿಗೆ ಬಂದಿದ್ದೆ. ಮನೆಯ ಕಿಟಕಿ ಮುರಿದು ಹಾಳು ಮಾಡಿದ್ದೆ, ಜತೆಗೆ ತಿಂಡಿ-ತಿನಿಸು, ಬಿಯರ್‌ ಎಲ್ಲಾ ತಿಂದು ಕುಡಿದು ಮುಗಿಸಿದ್ದೆ. ಅದಕ್ಕಾಗಿ ಹಣ ಇಟ್ಟು ಹೋಗಿದ್ದೇನೆ ಎಂದು ಹೇಳಿದ್ದಾನೆ. ಕೊನೆಗೆ ತನಿಖೆಯಿಂದ ತಿಳಿದುಬಂದದ್ದು ಏನೆಂದರೆ, ಈತ ಹೋಟೆಲ್‌ ಒಂದರಲ್ಲಿ ನಿಂತಿದ್ದ ಕಾರನ್ನು ಕದಿಯಲು ಬಯಸಿದ್ದ. ಆ ಕಾರಿನಲ್ಲಿದ್ದ ಮಹಿಳೆಗೆ ಬೆದರಿಕೆ ಹಾಕಿದ್ದ. ಆದರೆ ಆಕೆ ಜೋರಾಗಿ ಹಾರ್ನ್‌ ಹಾಕಲು ಶುರು ಮಾಡಿದಾಗ ಸ್ಥಳದಲ್ಲಿದ್ದವರು ಅಲ್ಲಿಗೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ ಕಳ್ಳ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. 

ಬಳಿಕ ಯಾರೂ ಇಲ್ಲದ ಮನೆಯೊಂದು ಕಂಡಿದೆ. ಇದೇ ತಪ್ಪಿಸಿಕೊಳ್ಳಲು ಒಳ್ಳೆಯ ಜಾಗ ಎನಿಸಿದೆ. ಕೊನೆಗೆ ಪೊಲೀಸರು ಅತ್ತ ಹೋದಾಗ ಮನೆಯೊಳಕ್ಕೆ ನುಗ್ಗಿದ್ದಾನೆ. ಓಡೋಡಿ ಹಸಿವು ಆದ್ದರಿಂದ ತಿಂಡಿ ಎಲ್ಲಾ ಮುಗಿಸಿ, ಸ್ನಾನವನ್ನೂ ಮಾಡಿ ಮಲಗಿ ಹೋಗಿದ್ದಾನೆ. ಅವನ ಕಣ್ಣು ಇದ್ದುದು ಆ ಕಾರಿನ ಮೇಲೆ. ಅದನ್ನು ಬಿಟ್ಟು ಬೇರೆ ಯಾವ ಯೋಚನೆಯೂ ಅವನಲ್ಲಿ ಇರಲಿಲ್ಲ. ಆದ್ದರಿಂದ ಅವನಿಗೆ ಹಣವನ್ನು ದೋಚಬೇಕು ಎಂದೂ ಅನ್ನಿಸಲಿಲ್ಲ. ಸದ್ಯ ಈತನ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ ಪೊಲೀಸರು.

Ads on article

Advertise in articles 1

advertising articles 2

Advertise under the article

ಸುರ