-->
ಮದುವೆಗೆ ಬರಬೇಡಿ ಎಂಬ ವಧು ಮನವಿ ಮಾಡಿರುವ ವೀಡಿಯೋ ವೈರಲ್: ಕಾರಣ ಇದು!

ಮದುವೆಗೆ ಬರಬೇಡಿ ಎಂಬ ವಧು ಮನವಿ ಮಾಡಿರುವ ವೀಡಿಯೋ ವೈರಲ್: ಕಾರಣ ಇದು!

ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ  ಹೆಚ್ಚಳವಾಗುತ್ತಿದೆ‌. ಈ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಮದುವೆಗೆ ಬರಬೇಡಿ ಎಂದು ವಧುವೊಬ್ಬಳು ಮನವಿ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. 

ಚಾಮರಾಜನಗರ ತಾಲೂಕಿನ ವಿ.ಸಿ‌.ಹೊಸೂರು ಗ್ರಾಮ ನಿವಾಸಿ ಸುಷ್ಮಾ ವಿವಾಹವು ಚನ್ನಪ್ಪನಪುರದ ನಿವಾಸಿ ಶ್ರೇಯಸ್ ರೊಂದಿಗೆ  ನಿಶ್ಚಯವಾಗಿತ್ತು. ಈ ಪ್ರಯುಕ್ತ ನಿನ್ನೆ ಹಾಗೂ ಇಂದು ಮದುವೆ ನಡೆಯಲಿದೆ. ಈಗಾಗಲೇ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿತ್ತು. ಆದರೆ, ಕೊರೊನಾ ಪ್ರಕರಣದ ಹೆಚ್ಚಳ ಹಿನ್ನೆಲೆಯಲ್ಲಿ ವಧು-ವರರೂ  ಮನೆಯಲ್ಲಿಯೇ ಸರಳ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. 

ಕೊರೊನಾ ಸೋಂಕು ಹೆಚ್ಚಳವಾಗದಿದ್ದಲ್ಲಿ ಇವರ ವಿವಾಹವು ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಸೋಂಕು​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಸರಕಾರ ಸಹ ವಿವಾಹ ಸಮಾರಂಭಗಳಿಗೆ ಇಂತಿಷ್ಟೇ ಜನಸಂಖ್ಯೆ ಇರಬೇಕೆಂದು ನಿಯಮಗಳನ್ನು ಹಾಕಿದೆ. 

ಸಾಕಷ್ಟು ಗೊಂದಲಗಳ ಮಧ್ಯೆ ಮಂಟಪದಲ್ಲಿ ಮದುವೆ ಮಾಡುವುದು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ಬಂದು ವಧೂ - ವರರ ಎರಡೂ ಕುಟುಂಬವು ವಧುವಿನ ಸ್ವಗೃಹದಲ್ಲೇ ಸರಳವಾಗಿ ವಿವಾಹ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಯಾರೂ ಮದುವೆಗೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವೀಡಿಯೋ ಮಾಡಿ ವಧು ಮನವಿ ಮಾಡಿದ್ದಾಳೆ. ಈ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

Ads on article

Advertise in articles 1

advertising articles 2

Advertise under the article