-->
ವಿದ್ಯುತ್ ಸಂಪರ್ಕವಿಲ್ಲದಿದ್ದರೂ ಬಿಲ್ ಮಾತ್ರ ಬಂತು ಬರೋಬ್ಬರಿ 36 ಸಾವಿರ ರೂ.: ಬಿಲ್ ನೋಡಿ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದ ವಿಕಲಚೇತನ!‌

ವಿದ್ಯುತ್ ಸಂಪರ್ಕವಿಲ್ಲದಿದ್ದರೂ ಬಿಲ್ ಮಾತ್ರ ಬಂತು ಬರೋಬ್ಬರಿ 36 ಸಾವಿರ ರೂ.: ಬಿಲ್ ನೋಡಿ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದ ವಿಕಲಚೇತನ!‌

ಮಹಾರಾಜಗಂಜ (ಪೂರ್ವಾಂಚಲ): ವಿಶೇಷ ಚೇತನ ವ್ಯಕ್ತಿಯೋರ್ವರ ಮನೆಗೆ ವಿದ್ಯುತ್ ​ ಸಂಪರ್ಕವನ್ನೇ ನೀಡದೆ 36 ಸಾವಿರ ರೂ.​ ಬಿಲ್​ ಕಳುಹಿಸಿರುವ ಘಟನೆ ಪೂರ್ವಾಂಚಲದ ಮಹಾರಾಜಗಂಜದಲ್ಲಿ ನಡೆದಿದೆ. 

ಮಹಾರಾಜಗಂಜ್‌ನ ಘುಘ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಭುವನಿ ಗ್ರಾಮದ ಚುವಾನಿ ಟೋಲಾ ನಿವಾಸಿ ವಿಶೇಷಚೇತನ ಅರ್ಜುನ್ ಪ್ರಸಾದ್​ ಮನೆಗೆ ಈ ಬಿಲ್ ಬಂದಿದೆ. ಅದನ್ನು ನೋಡಿದ ಅವರು ಕಂಗಾಲಾಗಿ ಹೋಗಿದ್ದು, ಈ ಬಿಲ್‌ ನೋಡಿದ ತಕ್ಷಣ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ. ಇದೀಗ ನ್ಯಾಯಕ್ಕಾಗಿ ಅವರು ವಿದ್ಯುತ್‌ ಇಲಾಖೆಯ ಮೊರೆ ಹೊಕ್ಕಿದ್ದಾರೆ. 

2012ರಲ್ಲಿ ತಮ್ಮ ಗ್ರಾಮವನ್ನು ರಾಮಮನೋಹರ್ ಲೋಹಿಯಾ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಆ ಸಂದರ್ಭ ನಮ್ಮ ಜಾಗದಲ್ಲಿ ಶೌಚಗೃಹದ ನಿರ್ಮಾಣ ಕಾರ್ಯ ನಡೆದಿತ್ತು. ಆಗ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯಡಿ ಗ್ರಾಮದ ಎಲ್ಲಾ ಮನೆಗಳಿಗೂ ವಿದ್ಯುತ್‌ ಸಂಪರ್ಕ ನೀಡುವ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಆದರೆ ಆ ಬಳಿಕ ವಿದ್ಯುತ್‌ ಕಂಬಕ್ಕೆ ವಿದ್ಯುತ್ ಸಂಪರ್ಕ ನೀಡದೆ ಮನೆಯ ಶೌಚಗೃಹಕ್ಕೂ ಮೀಟರ್‌ ಹಾಕಲಾಗಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೂ ವಿದ್ಯುತ್‌ ಮಾತ್ರ ಬಂದಿರಲಿಲ್ಲ. ಈ ಬಗ್ಗೆ ವಿದ್ಯುತ್ ಸಂಪರ್ಕ ನೀಡುವಂತೆ ಹಲವಾರು ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಆದರೆ ಬಿಲ್‌ ಮಾತ್ರ ಬಂದಿದೆ ಎಂದು ಅರ್ಜುನ್ ಪ್ರಸಾದ್​ ಹೇಳಿದ್ದಾರೆ. 

ಪ್ರತಿ ತಿಂಗಳೂ ಅರ್ಜುನ್‌ ಅವರಿಗೆ ಕರೆಂಟ್‌ ಬಿಲ್‌ ಬರುತ್ತಿತ್ತು. ಬಿಲ್‌ ಕಳುಹಿಸುತ್ತಿರುವ ಬಗ್ಗೆ 2012ರಿಂದ ಸುತ್ತದ ಜಾಗವಿಲ್ಲ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಆದರೆ ಈಗ ಒಟ್ಟಿಗೇ 36 ಸಾವಿರ ರೂ. ಬಿಲ್‌ ಬಂದಿದೆ. ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಅದು ವರದಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಇ. ಹರಿಶಂಕರ್​ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article