-->
ಮಂಗಳೂರಿನಲ್ಲಿ ಮತ್ತೊಂದು Omicron- ಘಾನಾ ದೇಶದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ರೂಪಾಂತರಿ

ಮಂಗಳೂರಿನಲ್ಲಿ ಮತ್ತೊಂದು Omicron- ಘಾನಾ ದೇಶದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ರೂಪಾಂತರಿ


ಮಂಗಳೂರು ; ಮಂಗಳೂರಿನಲ್ಲಿ ಓಮಿಕ್ರಾನ್ ರೂಪಾಂತಾರಿ ಮತ್ತೋರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಡಿಸೆಂಬರ್‌ 16 ರಂದು ಘಾನಾ ದೇಶದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ಇರುವುದು ದೃಢಪಟ್ಟಿದೆ. ಈತ ಹೈ ರಿಸ್ಕ್ ದೇಶದಿಂದ ಬಂದಿದ್ದು ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 16 ರಂದು ಬಂದಿದ್ದ ವೇಳೆ ತಪಾಸಣೆ ನಡೆಸಿದಾಗ ಈತನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೈ‌ರಿಸ್ಕ್ ದೇಶದಿಂದ ಬಂದ ಈ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಜಿನೊಮಿಕ್ ಸ್ಟಡಿಗೆ ಕಳುಹಿಸಲಾಗಿತ್ತು. ಇದರ ವರದಿ ಇಂದು ಬಂದಿದ್ದು ಈತನಿಗೆ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಈಗಾಗಲೇ 6 ಮಂದಿ ವಿದ್ಯಾರ್ಥಿಗಳಿಗೆ ಓಮಿಕ್ರಾನ್ ವೈರಸ್ ದೃಢಪಟ್ಟಿತ್ತು.ಇದೀಗ ಘಾನ ವ್ಯಕ್ತಿಗೆ ಓಮಿಕ್ರಾನ್ ದೃಢಪಟ್ಟಿರುವುದರಿಂದ ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

Ads on article

Advertise in articles 1

advertising articles 2

Advertise under the article