-->
ಸತ್ತಿದ್ದಾನೆಂದು ಅಂತ್ಯಸಂಸ್ಕಾರವಾಗಿದ್ದ ವ್ಯಕ್ತಿ 12 ವರ್ಷಗಳ ಬಳಿಕ ಪತ್ತೆ: ಎರಡನೇ ವಿವಾಹವಾದ ಪತ್ನಿ ಶಾಕ್

ಸತ್ತಿದ್ದಾನೆಂದು ಅಂತ್ಯಸಂಸ್ಕಾರವಾಗಿದ್ದ ವ್ಯಕ್ತಿ 12 ವರ್ಷಗಳ ಬಳಿಕ ಪತ್ತೆ: ಎರಡನೇ ವಿವಾಹವಾದ ಪತ್ನಿ ಶಾಕ್

ಪಟನಾ: ಬರೋಬ್ಬರಿ 12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿ ಪಾಕಿಸ್ತಾನದ ಜೈಲಿನಲ್ಲಿದ್ದಾನೆಂದು ತಿಳಿದು ಮತ್ತೊಂದು ಮದುವೆಯಾಗಿದ್ದ ಪತ್ನಿಯೀಗ ಶಾಕ್ ಗೆ ಒಳಗಾಗಿದ್ದಾಳೆ.

12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಿಹಾರದ ಬುಕ್ಸರ್​ ಜಿಲ್ಲೆಯ ನಿವಾಸಿ ಛವಿ ಕುಮಾರ್ ಗಾಗಿ ಆತನ ಕುಟುಂಬ ಸಾಕಷ್ಟು ಹುಡುಕಾಟ ನಡೆಸಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಆತನ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಒಂದು ಕುಟುಂಬ, ಆತ ಮೃತಪಟ್ಟಿದ್ದಾನೆಂದು ತಿಳಿದು ಅಂತಿಮ ವಿಧಿ ವಿಧಾನಗಳನ್ನು ಕೂಡ ನೆರವೇರಿಸಿದ್ದರು. ಆದರೆ, ಇದೀಗ ಆತ ಪಾಕಿಸ್ತಾನದ ಜೈಲೊಂದರಲ್ಲಿ ಇದ್ದಾನೆಂದು ತಿಳಿದು ಬಂದಿದೆ.

ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆಂದು ಹೇಳಲಾಗಿದೆ. ಛವಿ ಕುಮಾರ್ ಬಗ್ಗೆ ಹೇಳಿಕೆ ಪಡೆದುಕೊಳ್ಳಲು ಪಾಕ್​ ಜೈಲು ಅಧಿಕಾರಿಗಳು ನಿರಂತರವಾಗಿ ಭಾರತೀಯ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸುತ್ತಿದ್ದರು. ಬಳಿಕ ಛವಿಯ ಗುರುತು ಪತ್ತೆ ಮಾಡುವಂತೆ ವಿದೇಶಾಂಗ ಸಚಿವಾಲಯ ಬಿಹಾರ ಪೊಲೀಸ್​ ವಿಶೇಷ ವಿಭಾಗಕ್ಕೆ ಪತ್ರ ಬರೆದಿತ್ತು. ಬಳಿಕ ಆ ಮಾಹಿತಿ ಬುಕ್ಸರ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಛವಿ ಕುಮಾರ್ ಪಾಕಿಸ್ತಾನದ ಜೈಲಿನಲ್ಲಿದ್ದಾನೆಂಬ ವಿಚಾರ ಬಹಿರಂಗಗೊಂಡಿದೆ. 

ಇದೀಗ ಛವಿ ಕುಮಾರ್ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸರನ್ನು ಕೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆತ ಬುಕ್ಸರ್​ ಜಿಲ್ಲೆಯ ಮುಫಾಸ್ಸಿಲ್​ ಪೊಲೀಸ್​ ಠಾಣಾನ ವ್ಯಾಪ್ತಿಯಲ್ಲಿ ಬರುವ ಖಿಲಾಫತ್​ಪುರ್​ ಮೂಲದವನು ಎಂಬ ಮಾಹಿತಿ ದೊರಕಿದೆ. ಬಳಿಕ ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ 12 ವರ್ಷಗಳ ಹಿಂದೆ ಗ್ರಾಮದಲ್ಲಿ ಓರ್ವ ನಾಪತ್ತೆಯಾಗಿದ್ದ ಎಂಬ ಸುದ್ದಿಯನ್ನು ಗ್ರಾಮಸ್ಥರು ತಿಳಿಸಿದ್ದಾರೆ. ಇದಾದ ಬಳಿಕ ಛವಿ ಕುಮಾರ್ ಮನೆಗೆ ಹೋದ ಅಧಿಕಾರಿಗಳು ಆತನ ತಾಯಿಗೆ ಛವಿ ಫೋಟೋ ತೋರಿಸಿದಾಗ ಆತನ ಗುರುತು ಹಿಡಿದಿದ್ದಾರೆ. 

ಛವಿ ಮಾನಸಿಕ ಅಸ್ವಸ್ಥನಾಗಿದ್ದು, ಮದುವೆಯಾದ ಎರಡೇ ವರ್ಷದಲ್ಲಿ ಅಂದರೆ, 2009ರಲ್ಲಿ ನಾಪತ್ತೆಯಾಗಿದ್ದ. ಆಗ ಆತನಿಗೆ 23 ವರ್ಷ ವಯಸ್ಸಾಗಿತ್ತು. ಆತ ಮರಳಿ ಬಾರದಿರುವುದನ್ನು ಕಂಡು ಆತ ಮೃತಪಟ್ಟಿರಬಹುದೆಂದು ತಿಳಿದು ಅಂತಿಮ ವಿಧಿ ವಿಧಾನ ನೆರವೇರಿಸಿದ್ದೆವು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದೀಗ ತಾಯಿ, ತನ್ನ ಮಗನನ್ನು ಮರಳಿ ಮನೆಗೆ ಕರೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಪತಿ ಮರಳಿ ಬಾರದಿರುವುದರಿಂದ ಛವಿ ಪತ್ನಿ ಮತ್ತೊಂದು ವಿವಾಹವಾಗಿದ್ದಳು. ಇದೀಗ ಪತಿ ಇನ್ನು ಜೀವಂತ ಇದ್ದಾನೆ ಎಂಬುದನ್ನು ಕೇಳಿ ಅಚ್ಚರಿಯ ಜತೆಗೆ ಶಾಕ್​ ಕೂಡ ಆಗಿದ್ದಾಳೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100