-->
ಎಲ್ ಕೆ ಜಿ, ಯು ಕೆ ಜಿ, ಅಂಗನವಾಡಿ ಆರಂಭಕ್ಕೆ  ರಾಜ್ಯ ಸರಕಾರ ಹಸಿರು ನಿಶಾನೆ!

ಎಲ್ ಕೆ ಜಿ, ಯು ಕೆ ಜಿ, ಅಂಗನವಾಡಿ ಆರಂಭಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ!

ಬೆಂಗಳೂರು: ಕೋವಿಡ್ ಸೋಂಕು ಹಿಡಿತಕ್ಕೆ ಬರುತ್ತಿದ್ದಂತೆ ಸರಕಾರ ರಾಜ್ಯದಲ್ಲಿ ಹಂತ-ಹಂತವಾಗಿ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಪುನಾರಂಭಿಸಿದೆ. ಇದೀಗ ನವೆಂವರ್ 8ರಿಂದ ಎಲ್ಲಾ ಎಲ್​ಕೆಜಿ, ಯುಕೆಜಿ, ಅಂಗನವಾಡಿ ಕೇಂದ್ರಗಳನ್ನು ಸಹ ಪುನಾರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಅಂಗನವಾಡಿ ಕೇಂದ್ರಗಳು ಮುಚ್ಚಲ್ಪಟ್ಟಿತ್ತು. ಇದೀಗ ನ.8ರಿಂದ ಮರು ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. 


ಮಾರ್ಗಸೂಚಿಯಲ್ಲಿ ಏನೇನಿದೆ?

*  ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಎಲ್​ಕೆಜಿ, ಯುಕೆಜಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಬೇಕು.


*  ಮೊದಲ ಹಂತದಲ್ಲಿ ತರಗತಿಗಳನ್ನು ಬೆಳಗ್ಗೆ 10 ರಿಂದ 12 ರವರೆಗೆ ಮಾತ್ರ ನಡೆಸತಕ್ಕದ್ದು. ಎಲ್ಲಾ ಕೇಂದ್ರಗಳ ಆರಂಭಕ್ಕೂ ಮುನ್ನ ಈ ವಿಚಾರವನ್ನು ಸ್ಥಳೀಯ ಗ್ರಾಪಂ ಗಮನಕ್ಕೆ ತರಬೇಕು.


*  ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ಪಡೆದುಕೊಳ್ಳಬೇಕು.


*  ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಎರಡೂ ಡೋಸ್ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.


*  ಅಂಗನವಾಡಿಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮಾಡಿರಬೇಕು.


*  ಯುಕೆಜಿ, ಎಲ್​ಕೆಜಿ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಿರಬೇಕು. ಅಲ್ಲದೆ ಅದು ಪುಟ್ಟ ಮಕ್ಕಳ ಕೈಗೆ ಸಿಗದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು.


*  ಕೈ ತೊಳೆಯಲು ಸೋಪ್ ವ್ಯವಸ್ಥೆ ಮಾಡಿರಬೇಕು.* ಸಣ್ಣ ಮಕ್ಕಳನ್ನು ಕನಿಷ್ಠ ಒಂದು ಮೀಟರ್ ಅಂತರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಸಿಬ್ಬಂದಿ ಪಾಲಿಸಬೇಕು. 


*  ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ ತಂಡಗಳನ್ನು ರಚಿಸಿಬೇಕು. ದಿನಬಿಟ್ಟು ದಿನ ಮಕ್ಕಳ ತಂಡವು ತರಗತಿಗೆ ಹಾಜರಾಗಲು ಸೂಚಿಸಬೇಕು.


*  ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯುತ್ತಿರಬೇಕು.


*  ಅಂಗನವಾಡಿ ಕೇಂದ್ರಗಳಿಗೆ ಸಾರ್ವಜನಿಕರ ಭೇಟಿ ನಿರ್ಬಂಧಿಸಬೇಕು. 


*  ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್ ಲಕ್ಷಣಗಳಿರುವ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು.
ಎಲ್ ಕೆಜಿ, ಯುಕೆಜಿಯು ಸೋಮವಾರದಿಂದ ಶುಕ್ರವಾರದವರೆಗೆ - ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30ವರೆಗೆ ತೆರೆಯಲಿದೆ. ಅದೇ ರೀತಿ ಅಂಗನವಾಡಿಯು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲಿದೆ.

ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯದ ಹಿನ್ನೆಲೆಯಲ್ಲಿ ಈಗಿರುವಂತೆಯೇ ಮುಂದಿನ 15 ದಿನಗಳ ಕಾಲ ಕೇಂದ್ರದ ಪ್ರತಿ ಮಗುವಿಗೆ ಪೌಷ್ಠಿಕ ಆಹಾರದ ಧಾನ್ಯಗಳನ್ನು ಮನೆಗೆ ಕಳುಹಿಸಲಾಗುತ್ತದೆ. ಬಳಿಕ ಪೂರ್ಣ ಪ್ರಮಾಣದಲ್ಲಿ ಅಂಗನವಾಡಿಗಳನ್ನು ಆರಂಭಿಸಿ ಆಯಾ ಕೇಂದ್ರಗಳಲ್ಲೇ ಬಿಸಿಯೂಟ, ಹಾಲು, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article