-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಏರ್ ಟೆಲ್ ನಿಂದ ಗ್ರಾಹಕರ ಜೇಬಿಗೆ ಕತ್ತರಿ: ಕಾಲಿಂಗ್, ಡಾಟಾ ದರಗಳಲ್ಲಿ 20-25 ಶೇ. ಹೆಚ್ಚಳ

ಏರ್ ಟೆಲ್ ನಿಂದ ಗ್ರಾಹಕರ ಜೇಬಿಗೆ ಕತ್ತರಿ: ಕಾಲಿಂಗ್, ಡಾಟಾ ದರಗಳಲ್ಲಿ 20-25 ಶೇ. ಹೆಚ್ಚಳ

ನವದೆಹಲಿ: ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್‌ ನೀಡಿದೆ. ಕಂಪೆನಿಯು ಕಾಲಿಂಗ್‌ ಮತ್ತು ಡೇಟಾ ಟಾಪ್‌ಆ್ಯಪ್‌ಗಳ ದರಗಳನ್ನು ಶೇ.20ರಿಂದ 25ರಷ್ಟು ಹೆಚ್ಚಿಸಿವೆ. 

ಇತ್ತೀಚೆಗಷ್ಟೇ ಗ್ರಾಹಕರಿಗೆ ಹೊರೆ ಹೊರಿಸಿರುವ ಏರ್‌ಟೆಲ್‌ ಈಗ ಮತ್ತಷ್ಟು ದರ ಹೆಚ್ಚಿಸಿದೆ. ಈ ಯೋಜನೆ ಇದೇ ನವೆಂಬರ್ 26ರಿಂದ ಜಾರಿಗೆ ಬರಲಿದೆ. ಆರಂಭಿಕ ಕರೆಗಳ ಟಾರಿಫ್​ ಯೋಜನೆಯ ದರವನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆದರೆ, ಅನಿಯಮಿತ ಕರೆಗಳ ಯೋಜನೆಯು ಶೇ.20 ರಷ್ಟು ಹೆಚ್ಚಾಗಿದೆ. ಬೇಸ್ ಪ್ರಿಪೇಯ್ಡ್ ಏರ್‌ಟೆಲ್ ಯೋಜನೆಯು 99 ರೂ.ಗಳಿಂದ ಪ್ರಾರಂಭವಾಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ. 

ಸುಂಕ ಹೆಚ್ಚಳ ಹಾಗೂ ಅದೇ ಪ್ರಯೋಜನಗಳನ್ನು ಹೊಂದಿರುವ ಮೂಲ ಯೋಜನೆಯು ಪ್ರಸ್ತುತ 75 ರೂ.ನಲ್ಲಿ ಲಭ್ಯವಿರುತ್ತದೆ. ಕೆಲ ತಿಂಗಳ ಹಿಂದೆ ಈ ದರವು 45 ರೂ.ಗಳಷ್ಟಿತ್ತು. ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಏರ್ ಟೆಲ್ ಕಂಪೆನಿಯು, ಭಾರತದಲ್ಲಿ 5ಜಿಯನ್ನು ಹೊರತರಲು ಬಲ ನೀಡುತ್ತದೆ. ಆದ್ದರಿಂದ ದರ ಪರಿಷ್ಕರಣೆ ಮಾಡಲಾಗಿದೆ.

ಪರಿಣಾಮ ಪ್ರಸ್ತುತ 28 ದಿನಗಳ ಬಳಕೆಯ 79 ಯೋಜನೆಯ ನೂತನ ದರವು 99 ರೂ.ಗೆ ಏರಿಕೆಯಾಗಲಿದೆ. ಏರ್‌ಟೆಲ್ ಚಂದಾದಾರರು ಜನಪ್ರಿಯ ತಿಂಗಳ ಯೋಜನೆಗಳಿಗೆ ಕನಿಷ್ಠ 50 ರೂ.ಗಳನ್ನು ಪಾವತಿಸಬೇಕಾಗುತ್ತದೆ ಆದರೆ ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯ ಯೋಜನೆಗಳಿಗೆ ಕನಿಷ್ಠ 479 ರೂ. ಮತ್ತು 455 ರೂ.ಗಳನ್ನು ಪಾವತಿಸಬೇಕಾಗುತ್ತದೆ. 

ಡೇಟಾ ಟಾಪ್-ಅಪ್ ಯೋಜನೆಗಳ ದರ ಕೂಡ ಹೆಚ್ಚಾಗಿದೆ. ಈಗಿರುವ 48 ರೂ. ದರವನ್ನು 58 ರೂ. ಗೆ ಹೆಚ್ಚಿಸಲಾಗಿದೆ. 98 ರೂ. ಮತ್ತು 251 ರೂ. ರೀಪ್‌ಅಪ್‌ಗಳನ್ನು ಕ್ರಮವಾಗಿ 118 ರೂ. ಮತ್ತು 301 ರೂ. ಗೆ ಹೆಚ್ಚಿಸಲಾಗಿದೆ. 149 ರೂ. ದರವೀಗ 179 ರೂ. ಆಗಲಿದೆ. 219 ರೂ. 265 ರೂ. ಆಗಲಿದೆ. 249 ರೂ. ಮತ್ತು ರೂ 298 ಪ್ರಿಪೇಯ್ಡ್ ಯೋಜನೆಗಳು ಈಗ ಕ್ರಮವಾಗಿ 299 ಮತ್ತು 359 ರೂ.ಗೆ ಸಿಗಲಿದೆ. 56 ದಿನಗಳ ಮಾನ್ಯತೆಯೊಂದಿಗೆ ಈಗಿರುವ 399 ರೂ. ಪ್ಲಾನ್ 479 ರೂ. ಆಗಲಿದ್ದು, 449 ರೂ. ಯೋಜನೆ 549 ರೂ. ಗೆ ಏರಿಕೆಯಾಗಿದೆ.

Ads on article

Advertise in articles 1

advertising articles 2

Advertise under the article

ಸುರ