ಯುವತಿಯರ ನಿದ್ದೆಗೆಡಿಸಿದ ರಣ್‍ವೀರ್ ಸಿಂಗ್ ಬಾಸ್ಕೆಟ್ ಬಾಲ್ ಆಡುತ್ತಿರುವ ಫೋಟೋ: ಅಂತದ್ದೇನಿದೆ ಇದರಲ್ಲಿ?

ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ತಾವು ಬಾಸ್ಕೆಟ್ ಬಾಲ್ ಆಡುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗೆ ಇದು ಹಲವು ಯುವತಿಯರ ತಲೆ ಕೆಡಿಸಿದೆ. 

ಈ ಫೋಟೋಗೆ ಬಹುತೇಕ ಮಂದಿ ಹುಡುಗಿಯರೇ ಸಿಕ್ಕಾಪಟ್ಟೆ ಕಮೆಂಟ್‌ ಮಾಡಿದ್ದಾರೆ. ಈ ಫೋಟೋ ನಮ್ಮ ನಿದ್ದೆಗೆಡಿದೆ, ನೀವು ನಮ್ಮ ನಿದ್ದೆ ಕಸಿದುಕೊಂಡಿರುವಿರಿ ಎಂದು ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ ಎಂದು ನೀವು ಅಂದುಕೊಳ್ಳಬಹುದು. ಈ ಫೋಟೋದಲ್ಲಿ ರಣವೀರ್‌ ಸಿಂಗ್ ಶರ್ಟ್‌ ಧರಿಸಲಿಲ್ಲ. ಪರಿಣಾಮ ಅವರ ಸಿಕ್ಸ್‌ಪ್ಯಾಕ್‌ ದೇಹ ಎದ್ದು ಕಾಣುತ್ತಿತ್ತು. ಬಾಸ್ಕೆಟ್‌ ಬಾಲ್‌ ಅನ್ನು ನೆಟ್‌ನೊಳಗಡೆ ಹಾಕುವ ಫೋಟೋ ಇದಾಗಿದೆ. ಅವರು ನೆಟ್‌ನೊಳಗಡೆ  ಬಾಲ್ ಹಾಕಲು ಕೈಯನ್ನು ಮೇಲಕ್ಕೆತ್ತಿರುವ ಕಾರಣ, ಸಿಕ್ಸ್‌ಪ್ಯಾಕ್‌ ಇನ್ನೂ ಎದ್ದು ಯುವತಿಯರ ಕಣ್ಣಿಗೆ ರಾಚಿದೆ. 


ಜೊತೆಗೆ ಈ ರೀತಿಯಲ್ಲಿ ಸಿಕ್ಸ್ ಪ್ಯಾಕ್ ಎದ್ದು ಕಾಣಲೆಂದೇ ಈ ಫೋಟೋವನ್ನು ಅವರು ಶೇರ್‌ ಮಾಡಿಕೊಂಡಿದ್ದಾರೆ ಎನ್ನಲೂಬಹುದು. ಅಲ್ಲದೆ ಬಿಸಿಲಿಗೆ ಅವರ ಮೈ ಬೆವತಿರುವುದನ್ನೂ ಕಾಣಬಹುದು. ಬ್ಲೂ ಕಲರ್ ಶಾರ್ಟ್ಸ್ ಹಾಗೂ ವೈಟ್ ಕಲರ್ ಶೂ ಧರಿಸಿ ರಣವೀರ್ ಸಿಂಗ್ ಈ ಫೋಟೊವನ್ನು ಕ್ಲಿಕ್ಕಿಸಿದ್ದಾರೆ. ಕೆಲ ಯುವತಿಯರು ಇನ್ನೂ ಒಂದು ಹೆಜ್ಜೆ ಮುಂದೆ ಯೋಗಿ ನಿಮ್ಮ ಬೆವರು ಕೂಡ ನಮಗೆ ಇಷ್ಟವಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಸದ್ಯ ಈ ಫೋಟೋ ಸಕತ್‌ ವೈರಲ್‌ ಆಗಿದೆ.

ಸದ್ಯ ರಣವೀರ್ ಸಿಂಗ್ ಅವರ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥಾ ಹಂದರ ಹೊಂದಿರುವ ‘83’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಬೀರ್ ಖಾನ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಕಪಿಲ್‍ದೇವ್ ಪತ್ನಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.