-->

ರಸ್ತೆ ಅಪಘಾತದ ಗಾಯಾಳುವಿಗೆ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿದಲ್ಲಿ ಕೇಂದ್ರ ಸರಕಾರದಿಂದ ಬಹುಮಾನ ಘೋಷಣೆ!

ರಸ್ತೆ ಅಪಘಾತದ ಗಾಯಾಳುವಿಗೆ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿದಲ್ಲಿ ಕೇಂದ್ರ ಸರಕಾರದಿಂದ ಬಹುಮಾನ ಘೋಷಣೆ!

ನವದೆಹಲಿ: ರಸ್ತೆ ಅಪಘಾತವಾದ ಸಂದರ್ಭದಲ್ಲಿ ನೆರವಿಗೆ ಬರುವವರು ಬಹಳ ವಿರಳ. ಪೊಲೀಸ್ ಹಾಗೂ ಕಾನೂನು ಭಯವೇ ಇದಕ್ಕೆ ಮುಖ್ಯ ಕಾರಣ. ಹೆಚ್ಚಿನ ಸಂದರ್ಭ ನೆರವು ನೀಡುವ ಮನಸ್ಸುಳ್ಳವರೂ ಕೂಡಾ ನೆರವು ನೀಡಲು ಹೋಗಿ ಪೊಲೀಸರು, ಕೋರ್ಟ್‌, ಕಚೇರಿ ಎಂದೆಲ್ಲಾ ಅಲೆದಾಡಬೇಕಾಗುದೆ. ಯಾರಿಗೆ ಬೇಕು ಈ ಉಸಾಬರಿ ಎಂದುಕೊಂಡು ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡದೆ, ನಿರ್ದಯವಾಗಿ ಹೋಗುತ್ತಾರೆ.  

ಆದರೆ ಕೆಲ ವರ್ಷಗಳ ಹಿಂದೆ ಕೇಂದ್ರ ಸರಕಾರವು ಅಪಘಾತವಾದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ಅಂಥವರನ್ನು ಪೊಲೀಸರು ತನಿಖೆ ನಡೆಸೋದಿಲ್ಲ. ಅವರನ್ನು ಕೋರ್ಟ್‌, ಕಚೇರಿಗೆ ಅಲೆಯುವಂತೆ ಮಾಡುವುದಿಲ್ಲ. ಆದ್ದರಿಂದ ಧೈರ್ಯವಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ನೆರವಾಗಿ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಆದರೂ ಜನರಿಗೆ ಇನ್ನೂ ಇದರ ಬಗ್ಗೆ ಭಯ ಹೋಗಿರಲಿಲ್ಲ. 

ಸರಕಾರದ ಆದೇಶವಿದ್ದರೂ, ಜನರ ಭಯ ಹೋಗದೆ ಸಾಕಷ್ಟು ಅಪಘಾತದಿಂದ ಸಾವು ನೋವುಗಳು ಸಂಭವಿಸಿತ್ತು. ಇದಕ್ಕೆ ಉದಾಹರಣೆಯಾಗಿ 2020ರಲ್ಲಿ ಕೋವಿಡ್ ಲಾಕ್‌ಡೌನ್‌ ಇದ್ದರೂ ರಸ್ತೆ ಅಪಘಾತದಲ್ಲಿ 1,31,714 ಮಂದಿ ಜೀವ ಕಳೆದುಕೊಂಡಿದ್ದರು. ಇದರ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಸರಕಾರವು ಅಪಘಾತದ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ನೆರವು ನೀಡಿದರೆ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ. 

ಈ ಯೋಜನೆಯಡಿ, ಜಿಲ್ಲಾಡಳಿತವು ಓರ್ವ ಉತ್ತಮ ನಾಗರಿಕನಿಗೆ ಒಂದು ವರ್ಷದಲ್ಲಿ ಗರಿಷ್ಠ ಐದು ಬಾರಿ  5 ಸಾವಿರ ರೂ. ನಗದು ಬಹುಮಾನ ನೀಡಬಹುದು. ಪ್ರತಿ ವರ್ಷ ನಡೆಯುವ ಸರಕಾರಿ ಅಭಿನಂದನಾ ಸಮಾರಂಭದಲ್ಲಿ ನೆರವಿನ ಸಹಾಯಹಸ್ತ ಚಾಚಿದವರಿಗೆ 1ಲಕ್ಷ ರೂ. ನಗದು ನೀಡಲಾಗುತ್ತದೆ. ಈ ಯೋಜನೆ ಮಾರ್ಚ್ 2026 ರವರೆಗೆ ಜಾರಿಯಲ್ಲಿ ಇರಲಿದೆ. 

ಕಳೆದ ವರ್ಷವೇ ಕೇಂದ್ರ ಸರಕಾರ ಇಂಥ ಸಹಾಯ ಮಾಡುವವರಿಗೆ 5 ಸಾವಿರ ರೂ.ವರೆಗೆ ಬಹುಮಾನ ಘೋಷಿಸಿತ್ತು. ಇದೀಗ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು1ಲಕ್ಷ ರೂ.ವರೆಗಿನ ಬಹುಮಾನ ಘೋಷಿಸಿದೆ.

ಈ ಮೂಲಕ‌ ಅಪಘಾತವಾದ ಒಂದು ಗಂಟೆಯೊಳಗೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದಲ್ಲಿ ಅಂಥ ಒಬ್ಬ ವ್ಯಕ್ತಿಗೆ ಒಂದು ಬಾರಿಗೆ 5 ಸಾವಿರ ರೂ.ವರೆಗೆ ಬಹುಮಾನ ದೊರೆಯಲಿದೆ. ಒಂದು ವರ್ಷದಲ್ಲಿ ಇದೇ ರೀತಿಯಲ್ಲಿ ಸಹಾಯ ಮಾಡಿದ ಓರ್ವನಿಗೆ ಗರಿಷ್ಠ ಐದು ಬಾರಿ ಈ ರೀತಿಯ ಬಹುಮಾನ ದೊರೆಯಲಿದೆ. ಅಂದರೆ ವರ್ಷದಲ್ಲಿ ಓರ್ವನಿಗೆ 25 ಸಾವಿರ ರೂ‌.ವರೆಗೆ ನಗದು ಬಹುಮಾನ ಪಡೆಯಲು ಅವಕಾಶವಿದೆ.

ಇದೇ ಅಕ್ಟೋಬರ್ 15ರಿಂದ ಮಾರ್ಚ್ 2026 ರವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ. ಈ  ನಗದು ಯೋಜನೆಗೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ತೆರೆಯಲಿದೆ. ಈ ರೀತಿ ಸಹಾಯ ಮಾಡಿದ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದರೆ, ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿ ರಶೀದಿ ನೀಡುತ್ತಾರೆ. ಜಿಲ್ಲಾಡಳಿತವು ಅಪಘಾತದ ಗಾಯಾಳುವಿಗೆ ನೆರವು ನೀಡಿದ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಘಟನೆ ಮಾಹಿತಿ ಇತ್ಯಾದಿಗಳನ್ನು ದಾಖಲಿಸಲಿದೆ. ಅದಲ್ಲದೆ ಸ್ಥಳೀಯ ಪೊಲೀಸ್ ಅಥವಾ ಆಸ್ಪತ್ರೆಯು ಆಘಾತ ಕೇಂದ್ರದ ಆಡಳಿತವು ನೆರವು ನೀಡಿದ ವ್ಯಕ್ತಿಯ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗುತ್ತದೆ.

Ads on article

Advertise in articles 1

advertising articles 2

Advertise under the article