ಟಿಎಂಬಿ ಬ್ಯಾಂಕಿನಲ್ಲಿ 100 ಅಧಿಕಾರಿ ಹುದ್ದೆಗಳ ನೇಮಕಾತಿ- ಪದವೀಧರರಿಗೆ ಅವಕಾಶ



ತಮಿಳುನಾಡು ಮರ್ಕಂಟೈಲ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.





ಬ್ಯಾಂಕಿನಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ, ಕಾನೂನು ಅಧಿಕಾರಿ, ಮಾರ್ಕೆಟಿಂಗ್ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅಕ್ಟೋಬರ್ 3, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.



ಹುದ್ದೆ ಕುರಿತ ವಿವರಗಳು ಈ ಕೆಳಗಿನಂತಿವೆ.


ಬ್ಯಾಂಕ್ ಹೆಸರು: ತಮಿಳುನಾಡು ಮರ್ಕಂಟೈಲ್ ಬ್ಯಾಂಕ್(ಟಿಎಂಬಿ)


ಹುದ್ದೆಯ ಸ್ಥಳ; ವಿವಿಧ ಶಾಖೆಗಳು (ಮುಖ್ಯವಾಗಿ ದಕ್ಷಿಣ ಭಾರತ)


ಹುದ್ದೆಯ ಹೆಸರು: ಕೃಷಿ ಅಧಿಕಾರಿ, ಕಾನೂನು ಅಧಿಕಾರಿ, ಮಾರ್ಕೆಟಿಂಗ್ ಅಧಿಕಾರಿ


ವೇತನ: ಬ್ಯಾಂಕಿಂಗ್ ನಿಯಮಾವಳಿ ಪ್ರಕಾರ ಎಲ್ಲ ಸೌಕರ್ಯಗಳ ಜೊತೆಗೆ ವೇತನ


ಹುದ್ದೆಗಳ ಸಂಖ್ಯೆ: 100


ಕೃಷಿ ಅಧಿಕಾರಿ- 30

ಕಾನೂನು ಅಧಿಕಾರಿ- 35

ಮಾರ್ಕೆಟಿಂಗ್ ಅಧಿಕಾರಿ- 35



ಶೈಕ್ಷಣಿ ಅರ್ಹತೆ:


ಕೃಷಿ ಅಧಿಕಾರಿ- ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ

ಕಾನೂನು ಅಧಿಕಾರಿ- ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ, ಕಾನೂನು ಸ್ನಾತಕೋತ್ತರ ಪದವಿ

ಮಾರ್ಕೆಟಿಂಗ್ ಅಧಿಕಾರಿ- ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ/ಸ್ನಾತಕೋತ್ತರ ಪದವಿ


ವಯೋಮಿತಿ:


ಕೃಷಿ ಅಧಿಕಾರಿ- 18 ರಿಂದ 30 ವರ್ಷ ವಯಸ್ಸಾಗಿರಬೇಕು

ಕಾನೂನು ಅಧಿಕಾರಿ- 18 ರಿಂದ 35 ವರ್ಷ ವಯಸ್ಸಾಗಿರಬೇಕು

ಮಾರ್ಕೆಟಿಂಗ್ ಅಧಿಕಾರಿ- 18 ರಿಂದ 35 ವರ್ಷ ವಯಸ್ಸಾಗಿರಬೇಕು

(ನಿಯಮಾವಳಿ ಪ್ರಕಾರ ವಿವಿಧ ಪ್ರವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ)