Corona Update: ಕೊರೋನಾ ಪಟ್ಟಿಯಲ್ಲಿ ದ.ಕ.ಅಗ್ರಸ್ಥಾನ, ಸಾವಿನಲ್ಲೂ ಫಸ್ಟ್!

 ರಾಜ್ಯದಲ್ಲಿ ಕೊರೋನಾ ಇಳಿಮುಖ ಕಂಡರೂ ದಕ್ಷಿಣ ಕನ್ನಡದಲ್ಲಿ ಸೋಂಕು ರಾಜ್ಯಕ್ಕೆ ಅಗ್ರಸ್ಥಾನದಲ್ಲಿ ಇದೆ. 



ಕರ್ನಾಟಕದಲ್ಲಿ ಶನಿವಾರ 1632 ಹೊಸ ಪ್ರಕರಣಗಳು ಪತ್ತೆಯಾದರೆ ಅದರಲ್ಲಿ ಕಾಲು ಭಾಗ, ಅಂದರೆ 411 ಕೇಸುಗಳು ದಕ್ಷಿಣ ಕನ್ನಡದಲ್ಲಿ ಪತ್ತೆಯಾಗಿದೆ. ಸಾವಿನಲ್ಲೂ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದ್ದು, ಒಟ್ಟು 25 ಸಾವಿನಲ್ಲಿ ದಕ್ಷಿಣ ಕನ್ನಡದ ಪಾಲು 7 ಆಗಿದೆ.


ಬೆಂಗಳೂರು ನಗರ 377 ಹೊಸ ಪ್ರಕರಣಗಳೊಂದಿಗೆ ನಿರಾಳವಾಗಿದೆ. ಇಲ್ಲಿ ಶನಿವಾರ ಕೇವಲ ಒಂದು ಸಾವು ಸಂಭವಿಸಿದೆ. ಉಡುಪಿ ಜಿಲ್ಲೆಯಲ್ಲಿ 169 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಮೈಸೂರು 112 ಪ್ರಕರಣದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲೂ ಒಬ್ಬರು ಕೊರೋನಾಕ್ಕೆ ಬಲಿಯಾಗಿದ್ಧಾರೆ.

ಹಾಸನ 97,  ಕೊಡಗು 77, ಮತ್ತು ಚಿಕ್ಕಮಗಳೂರು 53 ಕ್ರಮವಾಗಿ ಆನಂತರದ ಸ್ಥಾನ ಪಡೆದಿವೆ.