-->

Vittla Covid report compulsory- ವಿಟ್ಲ ಪ್ರವೇಶಿಸಲು ಕೋವಿಡ್ ನೆಗೆಟಿವ್ ರಿಪೋರ್ಟ್ ‌ಕಡ್ಡಾಯ: ಸ್ಥಳೀಯಾಡಳಿತ ಆದೇಶಕ್ಕೆ ವಿರೋಧ

Vittla Covid report compulsory- ವಿಟ್ಲ ಪ್ರವೇಶಿಸಲು ಕೋವಿಡ್ ನೆಗೆಟಿವ್ ರಿಪೋರ್ಟ್ ‌ಕಡ್ಡಾಯ: ಸ್ಥಳೀಯಾಡಳಿತ ಆದೇಶಕ್ಕೆ ವಿರೋಧ


ವಿಟ್ಲ: ವಿಟ್ಲ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಟಾಸ್ಕ್ ಪೋರ್ಸ್ ಸಭೆಯಲ್ಲಿ ನಾಳೆಯಿಂದ ವಿಟ್ಲ ಪೇಟೆಗೆ ಪ್ರವೇಶಿಸುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಬೇಕು ಎಂದು ಆದೇಶಿಸಿದೆ. ಈ ವರದಿ ಹೊಂದಿಲ್ಲದಿದ್ದ ಪಕ್ಷದಲ್ಲಿ ಅವರನ್ನು ಸ್ಥಳದಲ್ಲಿಯೇ ಟೆಸ್ಟ್ ಮಾಡಿಸಲಾಗುವುದು ಎಂದು ತಿಳಿಸಲಾಗಿದೆ.



ಪಟ್ಟಣ ಪಂಚಾಯತ್ ನ ಈ ಆದೇಶಕ್ಕೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಆದೇಶದಿಂದ ಜನರಿಗೆ ತೊಂದರೆ ಆಗಲಿದ್ದು, ತೀರಾ ಅಗತ್ಯ ಸಂದರ್ಭದಲ್ಲಿ ವಿಟ್ಲ ಪೇಟೆಗೆ ಸುತ್ತಮುತ್ತಲಿನ ಜನರಿಗೆ ಅಗತ್ಯಕ್ಕಾಗಿ ಆಸ್ಪತ್ರೆಗೆ, ಔಷಧಿ ಅಂಗಡಿಗಳಿಗೆ, ಬ್ಯಾಂಕ್ ಗಳಿಗೆ,ಅಗತ್ಯ ಸಾಮಾಗ್ರಿಗಳ ಖರೀದಿ ಗಾಗಿ ಬರುವುದು ಅನಿವಾರ್ಯ ವಾಗಿದೆ ಎಂದು ಅದು ಹೇಳಿದೆ.








ಅಲ್ಲದೆ ವಿವಿಧ ಕೆಲಸಗಳಲಿಗೆ ದಿನ ನಿತ್ಯ ದೂರದ ಊರುಗಳಿಗೆ ತೆರಳುವವರು, ಕಾರ್ಮಿಕರು ಕೆಲಸಕ್ಕೆ ತೆರಳಲು ಕೂಡಾ ಪೇಟೆಯನ್ನು ಹಾದು ಹೋಗುವ ಅನಿವಾರ್ಯತೆ ಇದೆ. ನಿರ್ಮಾಣ ಕಾಮಗಾರಿಗಳಿಗೆ ಕೂಡಾ ಆರಂಭವಾಗಿದ್ದು ಇದಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿಗೆ ಕೂಡಾ ವಿಟ್ಲ ಆಸುಪಾಸಿನವರಿಗೆ ಪೇಟೆ ಯನ್ನು ಅನುಸರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಂಚಾಯತ್ ನ ಆದೇಶವು ಜನರ ಪಾಲಿಗೆ ಕಷ್ಟಕರವಾಗಿದೆ ಎಂದು ಡಿವೈಎಫ್‌ಐ ಅಭಿಪ್ರಾಯಪಟ್ಟಿದೆ.



ಅಲ್ಲದೆ ಜನರ ಜೀವನದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಈ ರೀತಿಯ ಆದೇಶವನ್ನು ಮಾಡಿರುವುದು ಪಟ್ಟಣ ಪಂಚಾಯತ್ ನ ಜನ ವಿರೋಧಿ ನಿಲುವಿಗೆ ಸ್ಪಷ್ಟ ನಿದರ್ಶನವಾಗಿದೆ. ಈ ಬಗ್ಗೆ ಪಂಚಾಯತ್ ಆದೇಶವನ್ನು ಪುನರ್ ಪರಿಶೀಲಿಸಿ ಅಗತ್ಯ ಸೇವೆಗೆ ಜನರಿಗೆ ಪೇಟೆಗೆ ಬರಲು ಕೋವಿಡ್ ಟೆಸ್ಟ್ ನಿಂದ ವಿನಾಯತಿ ನೀಡಬೇಕಾಗಿ ಡಿ.ವೈ.ಎಫ್.ಐ‌ ವಿಟ್ಲ ವಲಯ ಸಮಿತಿ ಒತ್ತಾಯಿಸಿದೆ.

Ads on article

Advertise in articles 1

advertising articles 2

Advertise under the article