Covid out of control?- ದಕ್ಷಿಣ ಕನ್ನಡದಲ್ಲಿಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲವೇ..? ಲಾಕ್‌ಡೌನ್ ಮುಂದುವರಿಯುತ್ತಾ..?






ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಂತ ಇಂದಿನ ಸೋಂಕಿತರ ಸಂಖ್ಯೆ ಹೇಳುತ್ತಿದೆ. ಕಳೆದ ಒಂದೆರಡು ದಿನಗಳಲ್ಲಿ 500-800 ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಇಂದು ಸಾವಿರದ ಗಡಿ ದಾಟಿದೆ.



ಇಂದು ಒಂದೇ ದಿನ 1,006 ಮಂದಿಗೆ ಸೋಂಕು ತಗುಲಿದೆ. ಜಿಲ್ಲೆಯ ಇಂದಿನ‌ ಪಾಸಿಟಿವಿಟಿ ರೇಟ್ 10.07% ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.



ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೋನಾ ಮಹಾಮಾರಿಗೆ ಒಟ್ಟು ಹದಿನೈದು ಮಂದಿ ಬಲಿಯಾಗಿದ್ಧಾರೆ.





66* ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 6,931 ಆಕ್ವೀವ್ ಪ್ರಕರಣಗಳು ಇವೆ ಎಂದು ಇಲಾಖೆ ಅಂಕಿ ಅಂಶ ಹೇಳುತ್ತಿವೆ. ದ.ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 87,350 ಪಾಸಿಟಿವ್ ಕೇಸ್ ಇದೆ.



ಈ ಹಿನ್ನೆಲೆಯಲ್ಲಿ ಮುಂದಿನ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ಜನರ ಆಸೆಗೆ ತಣ್ಣೀರು ಸುರಿದಂತಾಗಿದೆ. ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬಹುದೇ ಎಂಬ ಆತಂಕವೂ ಜನರಲ್ಲಿ ಮೂಡಿದೆ.

BREAKING NEWS
Loading latest news...
Join our WhatsApp Channel Powered By : Online Pudu